ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲೂರು: ಸಂಕ್ರಾತಿ ಅಂಗವಾಗಿ ಸಾಂಪ್ರದಾಯಿಕ ಭಿಕ್ಷಾಟನೆ

Published 16 ಜನವರಿ 2024, 15:12 IST
Last Updated 16 ಜನವರಿ 2024, 15:12 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಗುಂಡ್ಲೂರು ಗ್ರಾಮದಲ್ಲಿ ಸೋಮವಾರ ಬೇಡ ಜಂಗಮ ಜನಾಂಗದವರು ಸಂಕ್ರಾತಿ ಅಂಗವಾಗಿ ಸಾಂಪ್ರದಾಯಕವಾಗಿ ಭಿಕ್ಷಾಟನೆ ನಡೆಸಿದರು.

‘ಭಿಕ್ಷಾಟನೆಯು ಬೇಡ ಜಂಗಮ ಜನಾಂಗದ ಮೂಲ ಕಸುಬು. ಪೂರ್ವಿಕರು ಜಂಗಮ ವೇಷ ಧರಿಸಿ ಊರೂರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನಾಂಗವು ಅಭಿವೃದ್ಧಿ ಹೊಂದುತ್ತಿರುವ ಕಾರಣ ಮೂಲ ಕಸುಬು ಮರೆಯಾಗುತ್ತಿದೆ. ಜನಾಂಗದ ಮಕ್ಕಳಿಗೆ ನಾವು ನಡೆದು ಬಂದ ಹಾದಿ ಬಗ್ಗೆ ಮನವರಿಕೆ ಮಾಡಲು ಪ್ರತಿವರ್ಷ ಸಂಕ್ರಾತಿ ಹಬ್ಬದಂದು ಸಾಂಪ್ರದಾಯಕ ಭಿಕ್ಷಾಟನೆ ನಡೆಸಲಾಗುತ್ತಿದೆ’ ಎಂದು ಜನಾಂಗದ ಹಿರಿಯರು ತಿಳಿಸಿದರು.

ಬೇಡಜಂಗಮ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿರುವ ಗುಂಡ್ಲೂರಿನಲ್ಲಿ ವಯಸ್ಸಿನ ಭೇದವಿಲ್ಲದೇ ಜನಾಂಗದವರು ಭಾಗವಹಿಸಿ ಮನೆ, ಮನೆಗೆ ತೆರಳಿ ಶಿವನ ಹೆಸರಿನಲ್ಲಿ ಜೋಳಿಗೆಗಳನ್ನು ಹಾಕಿಕೊಂಡು ಭಿಕ್ಷಾಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT