ಹೊಸದುರ್ಗ: ತಾಲ್ಲೂಕಿನ ದೇವಿಗೆರೆ ಗ್ರಾಮದಲ್ಲಿ ನೆಲೆಸಿರುವ ಅದಿದೇವತೆಗಳಾದ ದೊಡ್ಡಮ್ಮ ಹಾಗೂ ಕರಿಯಮ್ಮ ದೇವಿಯವರ ಸಿಡಿ ಉತ್ಸವ ಭಾನುವಾರ ಸಂಜೆ ನಡೆಯಿತು.

ದೇವಿಗೆರೆಯಲ್ಲಿ ಅತಿ ಹೆಚ್ಚು ಜನ ಸೇರುವ ವಿಶೇಷ ದಿನವೇ ಸಿಡಿ ಉತ್ಸವ. ಈ ದಿನದ ಅಂಗವಾಗಿ ಭಾನುವಾರ ಮಧ್ಯಾಹ್ನದಿಂದ ದೇವರ ಉತ್ಸವ ಪ್ರಮುಖ ಬೀದಿಗಳಲ್ಲಿ ನಡೆಯಿತು.

‘ಮಾರ್ಚ್ 31ರಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಿಡಿ ಉತ್ಸವ ಸಂಜೆ ಆರಂಭವಾಗುತ್ತಿದ್ದಂತೆಯೇ ದೊಡ್ಡಮ್ಮ ದೇವಾಲಯದ ಸಮೀಪ ಸಾವಿರಾರು ಭಕ್ತರ ದಂಡೇ ಹರಿದು ಬರುತ್ತಿತ್ತು. ಸುಮಾರು 6,000ಕ್ಕೂ ಹೆಚ್ಚು ಜನ ಈ ದೃಶ್ಯವನ್ನು ಕಣ್ತುಂಬಿಕೊಂಡರು. ಓಕುಳಿ ಮತ್ತು ಮಹಾಮಂಗಳಾರತಿ ನಂತರ ರಥೋತ್ಸವದ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು’ ಎಂದು ವರುಣ್ ದೇವಿಗೆರೆ ಹೇಳಿದರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.