ಸಿರಿಗೆರೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಮಾತನಾಡಿದರು
ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಆಕಾಂಕ್ಷಿಗಳು
ಅವಕಾಶ ಒದಗಿಸಿದ ಮೇಳ
‘ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಎಂ.ಕಾಂ ನಂತರ ನಾನು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ಆದರೆ ಸೂಕ್ತ ಅವಕಾಶವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈ ಉದ್ಯೋಗ ಮೇಳವು ನನಗೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಅವಕಾಶ ಒದಗಿಸಿದೆ. ಇದರಿಂದ ನನಗೆ ಮತ್ತು ಕುಟುಂಬಕ್ಕೆ ನೆರವಾಗಲಿದೆ’ ಎಂದು ಮೇಳದಲ್ಲಿ ಉದ್ಯೋಗ ಪಡೆದ ತಣಿಗೆಹಳ್ಳಿ ಗ್ರಾಮದ ಇ.ಸೌಂದರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.