ಸಿರಿಗೆರೆ: ವಿದ್ಯಾರ್ಥಿಗಳು ಸಹಪಾಠಿಗಳ ಜೊತೆಗೆ ಸ್ಪರ್ಧೆಗಿಳಿಯದೆ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಶಿಕಾರಿಪುರದ ಸಾಧನಾ ಅಕಾಡೆಮಿ ಮುಖ್ಯಸ್ಥ ಬಿ. ಮಂಜುನಾಥ್ ತಿಳಿಸಿದರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಶನಿವಾರ ಸಿರಿಗೆರೆಯಲ್ಲಿ ಆಯೋಜಿಸಿದ್ದ ‘ಪರೀಕ್ಷೆ ಒಂದು ಹಬ್ಬ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ನಿಮ್ಮ ಗೆಳೆಯರು ಎಷ್ಟು ಅಂಕ ತೆಗೆಯುತ್ತಿದ್ದಾರೆ ಎನ್ನುವ ಕಡೆ ಕುತೂಹಲ ತೋರದೆ ನಿಮ್ಮದೇ ಸಾಧನೆ ತೋರಿ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷಾ ವಿಧಾನ ಬದಲಾಗುತ್ತಿದ್ದು, ಪರೀಕ್ಷೆ ಮತ್ತಷ್ಟು ಸುಲಭವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ ಎಂದರು.

‘ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸಿ. ತರಗತಿಗಳಲ್ಲಿ ಶಿಕ್ಷಕರ ಪಾಠಗಳನ್ನು ಸರಿಯಾಗಿ ಕೇಳಿ ಅದನ್ನು ಪರಾಮರ್ಶೆಗೆ ಒಳಪಡಿಸಿ ಅಧ್ಯಯನಶೀಲರಾದರೆ ಗೆಲವು ಸಿಗುತ್ತದೆ. ಪರೀಕ್ಷೆಗೆ ಯುದ್ಧಕ್ಕೆ ಸಜ್ಜಾಗುವ ರೀತಿಯ ಧಾವಂತ ಬೇಡ. ಶಿಕ್ಷಣ ಬದುಕಿಗೆ ಜ್ಞಾನ ತಂದು ಕೊಡುವ ಪ್ರಕ್ರಿಯೆ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ನಮ್ಮ ಭವಿಷ್ಯದ ಬದುಕಿಗೆ ಏಕೈಕ ಮಾರ್ಗಸೂತ್ರಗಳಲ್ಲ. ಹೆಚ್ಚು ಅಂಕ ಗಳಿಸಿದವರಂತೆಯೇ ಕಡಿಮೆ ಅಂಕಗಳನ್ನು ಗಳಿಸಿದವರ ಬದುಕು ಕೂಡ ಚೆನ್ನಾಗಿಯೇ ಸಾಗಿದೆ’ ಮುಖ್ಯ ಅತಿಥಿ ಚಿತ್ರದುರ್ಗದ ಮನೋವೈದ್ಯ ಮಂಜುನಾಥ್ ತಿಳಿಸಿದರು.

‘ಪ್ರಶ್ನೆ ಕೇಳುವ ಮೂಲಕ ಮನಸ್ಸಿನೊಳಗಿನ ದುಗುಡವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ಎಸ್. ಜತ್ತಿ ತಿಳಿಸಿದರು.

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ದೂರಮಾಡಿ ಅವರಲ್ಲಿ ಮನೋಬಲ ಬೆಳೆಯುವಂತೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಅಧಿಕಾರಿ ಕೆ.ಇ. ಬಸವರಾಜಪ್ಪ ಭಾಗವಹಿದ್ದರು. ವಿದ್ಯಾರ್ಥಿನಿಯರಾದ ಬಸಮ್ಮ ತಂಡವರು ಪ್ರಾರ್ಥಿಸಿದರೆ, ಶಿಕ್ಷಕ ವಿಜಯಾಚಾರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.