ಸಿರಿಗೆರೆ: ಮಠದಲ್ಲಿ ಪುರಾತನ ತಾಳೆಗರಿಗಳ ಸಂಗ್ರಹವಿದ್ದು, ಅವುಗಳನ್ನು ಗಣಕೀಕರಿಸಿ ರಕ್ಷಿಸುವ ಕೆಲಸವನ್ನು ಮಾಡಲಾಗುವುದು ಎಂದು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಳೆಗರಿಗಳನ್ನು ರಕ್ಷಿಸಿಡುವ ಕಾರ್ಯಕ್ಕೆ ಚಾಲನೆ ನೀಡಲು ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

‘ಹಿರಿಯ ಗುರುಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗೆ ವಚನ ಸಾಹಿತ್ಯವನ್ನು ಜಗತ್ತಿನಾದ್ಯಂತ ಪ್ರಚುರಪಡಿಸಬೇಕೆಂಬ ಮಹದಾಸೆ ಇತ್ತು. ಅದಕ್ಕಾಗಿ ಅವರು 1965ರ ವೇಳೆ ಪೀಠಿಕೆ ಹಾಕಿದ್ದರು. ಆ ಕೆಲಸವನ್ನು ಮುಂದುವರಿಸಲು ಮಠದಲ್ಲಿನ ಪುರಾತನ ಕಾಲದ ಎಲ್ಲ ತಾಳೆಗರಿಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಿಸಿ ರಕ್ಷಿಸಿಡಲಾಗುವುದು’ ಎಂದು ಹೇಳಿದರು.

‘ಮಠದ ಗ್ರಂಥಾಲಯದಲ್ಲಿ ಹಲವಾರು ತಾಳೆಗರಿಗಳಿವೆ. ಕಾಲಕ್ರಮೇಣ ಅವು ನಶಿಸಿ ಹೋಗದಂತೆ ಸಂರಕ್ಷಿಸಿಡುವ ಕೆಲಸಕ್ಕೆ ಶ್ರೀಮಠ ಮುಂದಾಗಿದೆ. ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವ ಕೆಲಸ ಶ್ರೀಮಠದಿಂದಾಗುತ್ತಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕಲಬುರ್ಗಿ ವಿಶ್ವವಿದ್ಯಾಲಯಗಳ ಪಠ್ಯಸಂಪತ್ತನ್ನು ರಕ್ಷಿಸಿಡುವ ಕೆಲಸದಲ್ಲಿ ಈಗಾಗಲೇ ತೋಡಗಿಸಿಕೊಂಡಿರುವ ಬೆಂಗಳೂರಿನ ಅಶೋಕ್ ದೊಮ್ಮಲೂರು ಶ್ರೀಮಠದಲ್ಲಿರುವ ತಾಳೆಗರಿಗಳನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿದ್ದಾರೆ’ ಎಂದರು.

‘ತರಳಬಾಳು ಮಠದಲ್ಲಿ ತಾಳೆಗರಿಗಳ ಅಪೂರ್ವ ಸಂಗ್ರಹವೇ ಇದೆ. ಆರಂಭದಲ್ಲಿ ಅವುಗಳ ಮೇಲಿನ ದೂಳನ್ನು ತೆಗೆದು, ನಂತರ ಲೆಮನ್ ಗ್ರಾಸ್ ದ್ರಾವಣ ಸಿಂಪಡಿಸಿ ಸ್ಚಚ್ಛಗೊಳಿಸುತ್ತೇವೆ. ಆನಂತರವಷ್ಟೇ ಅವು ಕಂಪ್ಯೂಟರ್ ಸ್ಕ್ಯಾನಿಂಗ್ಗೆ ಸಿದ್ಧಗೊಳ್ಳುತ್ತವೆ. ಮಠದಲ್ಲಿ ಲಭ್ಯವಿರುವ ಆಧುನಿಕ ಕಂಪ್ಯೂಟರ್ಗಳನ್ನು ಬಳಸಿಕೊಂಡು ತಜ್ಞರು ಸ್ಕ್ಯಾನಿಂಗ್ ಆರಂಭಿಸುತ್ತಾರೆ’ ಎಂದು ಈ– ಸಾಹಿತ್ಯದ ನಿರ್ದೇಶಕ ಅಶೋಕ್ ದೊಮ್ಮಲೂರು ಮಾಹಿತಿ ನೀಡಿದರು.

‘ವಚನ ಸಾಹಿತ್ಯದ ಬಗ್ಗೆ ಶ್ರೀಗಳು ಅಪಾರ ಜ್ಞಾನ ಸಂಪಾದಿಸಿದ್ದಾರೆ. ಪ್ಯಾರಿಸ್ ಗ್ರಂಥಾಲಯದಲ್ಲಿ ಲಭ್ಯವಾದ ತಮಿಳು ಭಾಷೆಯ ವಚನಗಳನ್ನು ಓದುವ ಸಲುವಾಗಿಯೇ ಅವರು ತಮಿಳು ಭಾಷೆ ಕಲಿತದ್ದು ವಿಸ್ಮಯವಾಗಿದೆ’ ಎಂದರು.

ಮಠದಲ್ಲಿ ತಾಳೆಗರಿಗಳ ರಾಶಿ

ಸಿರಿಗೆರೆಯ ತರಳಬಾಳು ಮಠದಲ್ಲಿ ನಾಲ್ಕು ವರ್ಷಗಳಿಂದ 267 ಬಂಡಲ್ ತಾಳೆಗರಿಗಳನ್ನು ಸಂಗ್ರಹ ಮಾಡಲಾಗಿದೆ. ಅವುಗಳಲ್ಲಿ ಬಸವಣ್ಣ ಅಲ್ಲಮಪ್ರಭು ಸೇರಿ ಎಲ್ಲ ಶಿವಶರಣರ ವಚನಗಳು ಪ್ರಾಚೀನ ಕೃತಿಗಳು ಮರುಳಸಿದ್ದೇಶ್ವರ ಚರಿತೆ ಸೋಮೇಶ್ವರ ಶತಕ ರೇವಣ್ಣಸಾಂಗತ್ಯ ಕರಿಬಂಟನ ಕಾಳಗ ಕಾಲಜ್ಞಾನ ರಾಘವಾಂಕ ಕಾವ್ಯ ಮೋಹನತರಂಗಿಣಿ ವಿವೇಕ ಚಿಂತಾಮಣಿ ನಿಜಲಿಂಗ ಶತಕ ಮುಂತಾದ ಕೃತಿಗಳೂ ಇವೆ. ಅವುಗಳನ್ನು ಕಾಪಿಡುವ ಕೆಲಸಕ್ಕೆ ಮಠ ಈಗ ಹೆಜ್ಜೆ ಇರಿಸಿದೆ. ‘ಗಿರಿಜಾ ಕಲ್ಯಾಣ’ ಸ್ಕ್ಯಾನಿಂಗ್ ಮಾಡಿದ ಶ್ರೀಗಳು ಕಂಪ್ಯೂಟರ್ ಬಳಕೆ ಬಗ್ಗೆ ವಿಶೇಷ ಆಸಕ್ತಿ ಇರುವ ಶ್ರೀಗಳು ಮಠದ ಸಂಗ್ರಹದಲ್ಲಿದ್ದ ಗಿರಿಜಾ ಕಲ್ಯಾಣ ಕೃತಿಯ ತಾಳೆಗರಿಗಳನ್ನು ಖುದ್ದು ಸ್ಕ್ಯಾನಿಂಗ್ ಮಾಡಿದರು. ಇಂತಹ ಅಪರೂಪದ ಸಾಹಿತ್ಯಕ ಕೃತಿಗಳನ್ನು ರಕ್ಷಿಸಿಡುವುದು ಎಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.