ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಸರ್ಕಾರ ಟೀಕಿಸಿ ಫೇಸ್‌ಬುಕ್‌ನಲ್ಲಿ ಬರಹ, ಶಿಕ್ಷಕ ಅಮಾನತು

Published 21 ಮೇ 2023, 5:17 IST
Last Updated 21 ಮೇ 2023, 5:17 IST
ಅಕ್ಷರ ಗಾತ್ರ

ಹೊಸದುರ್ಗ: ಸರ್ಕಾರ ಟೀಕಿಸುವ ಬರಹವನ್ನು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ತಾಲ್ಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌. ಜಯಪ್ಪ ಅಮಾನತು ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಶಾಂತಮೂರ್ತಿ ಅವರು, ‘ಎಸ್.ಎಂ. ಕೃಷ್ಣ ಅವಧಿಯಲ್ಲಿ ₹ 3,590 ಕೋಟಿ, ಧರ್ಮಸಿಂಗ್ ₹ 15,635 ಕೋಟಿ, ಎಚ್.ಡಿ. ಕುಮಾರಸ್ವಾಮಿ ₹ 3,545 ಕೋಟಿ, ಬಿ.ಎಸ್‌. ಯಡಿಯೂರಪ್ಪ ₹ 25,653 ಕೋಟಿ, ಸದಾನಂದಗೌಡ ₹ 9,464 ಕೋಟಿ, ಜಗದೀಶ ಶೆಟ್ಟರ್ ₹ 13,464 ಕೋಟಿ, ಸಿದ್ದರಾಮಯ್ಯ ₹ 2,42,000 ಕೋಟಿ ಸಾಲ ಮಾಡಿದರು.

ಎಸ್.ಎಂ. ಕೃಷ್ಣ ಅವಧಿಯಿಂದ ಶೆಟ್ಟರ್‌ವರೆಗೆ ಮಾಡಿದ ಒಟ್ಟು ಸಾಲ ₹ 71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ‌ಸಾಲ ₹ 2,42,000 ಕೋಟಿ. ಹೀಗಿರುವಾಗ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು’ ಎಂದು ಬರಹದಲ್ಲಿ ಟೀಕಿಸಿದ್ದರು. ಈ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೂ ಶೇರ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT