ಆರು ತಿಂಗಳಿಂದ ಎಟಿಎಂ ಬಾಗಿಲು ಬಂದ್ ಆಗಿದೆ. ತಾಲ್ಲೂಕು ಕಚೇರಿ, ಉಪನೋಂದಣಾಧಿಕಾರಿ ಕಚೇರಿಗೆ ಬರುವ ನೂರಾರು ಗ್ರಾಹಕರಿಗೆ ಹತ್ತಿರದಲ್ಲಿರುವುದು ಇದೊಂದೇ ಎಟಿಎಂ. ಎಟಿಎಂ ಬಂದ್ ಆಗಿರುವುದರಿಂದ ನಿತ್ಯ ಈ ಕಚೇರಿಗೆ ಬರುವ ಜನರು ಅಗತ್ಯ ಸಂದರ್ಭದಲ್ಲಿ ಹಣ ಪಡೆಯಲು ತೊಂದರೆಯಾಗಿದೆ. ಬ್ಯಾಂಕ್ ಅಧಿಕಾರಿಗಳು ತಕ್ಷಣ ಎಟಿಎಂ ಬಾಗಿಲು ತೆರೆದು ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು.