ಗನ್ನಾಯಕನಹಳ್ಳಿ (ಹಿರಿಯೂರು): ವಿದ್ಯಾನಗರ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಗನ್ನಾಯಕನಹಳ್ಳಿಯ ಯುವತಿ ಪ್ರಸ್ತುತ ಭಾರತೀಯ ವಾಯುಸೇನೆಯ ವೈದ್ಯ ಹುದ್ದೆಗೆ ಆಯ್ಕೆ ಆಗಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಟಿ.ಎಸ್. ತಿಪ್ಪೇಸ್ವಾಮಿ ಹಾಗೂ ಗೀತಾಸ್ವಾಮಿ ದಂಪತಿಯ ಎರಡನೇ ಮಗಳು ಡಾ.ನೇಹಾಸ್ವಾಮಿ ಬೆಂಗಳೂರಿನ ವಾಯುಸೇನೆ ಕಚೇರಿಯಲ್ಲಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಗನ್ನಾಯಕನಹಳ್ಳಿಯಲ್ಲಿ ಜನಿಸಿರುವ ನೇಹಾ 1 ಮತ್ತು 2ನೇ ತರಗತಿಯನ್ನು ಹೈದರಾಬಾದ್‌ನಲ್ಲಿ, 3ನೇ ತರಗತಿಯನ್ನು ಬಳ್ಳಾರಿಯಲ್ಲಿ, 4ರಿಂದ 7ರವರೆಗೆ ಹಿರಿಯೂರಿನಲ್ಲಿ, 8ನೇ ತರಗತಿಯನ್ನು ಚಿತ್ರದುರ್ಗದಲ್ಲಿ, ನಂತರ ದ್ವಿತೀಯ ಪಿಯುವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 2020ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.
‘ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮನಸ್ಸಿತ್ತು. ಕೋವಿಡ್ ಕಾರಣಕ್ಕೆ ಪದೇ ಪದೇ ಪರೀಕ್ಷೆಗಳು ಮುಂದೂಡಲಾದವು. 2020ರ ಜುಲೈನಲ್ಲಿ ನವದೆಹಲಿಯಿಂದ ಎಎಫ್‌ಎಂಎಸ್ (ಆರ್ಮಿ ಫೋರ್ಸ್ ಮೆಡಿಕಲ್ ಸರ್ವೀಸ್)ನಿಂದ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಜುಲೈ ಕೊನೆಯ ವಾರದಲ್ಲಿ ಸಂದರ್ಶನ ನಡೆಸಿ, ನನ್ನನ್ನು ವೈದ್ಯ ಹುದ್ದೆಗೆ (ಫ್ಲೈಟ್ ಲೆಫ್ಟಿನೆಂಟ್ ಎಂದು ಕರೆಯಲಾಗುತ್ತದೆ. ಕ್ಯಾಪ್ಟನ್ ಹುದ್ದೆಗೆ ಸಮಾನವಾದುದು) ಆಯ್ಕೆ ಮಾಡಲಾಗಿದೆ’ ಎಂದು ನೇಹಾ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.