ಚಿತ್ರದುರ್ಗ: ‘ಬಾಲಕಿ ಅರಚುವ ಶಬ್ದ ಕಿವಿ ಮೇಲೆ ಬಿದ್ದಾಗ ನಿರ್ಲಕ್ಷ ಮಾಡಿದೆವು. ಸಂಕಟದ ಧ್ವನಿಯಲ್ಲಿ ಅಳಲು ಪ್ರಾರಂಭಿಸಿದಾಗ ಅಂಗಡಿಯಿಂದ ಹೊರಗೆ ತಲೆ ಹಾಕಿದೆ. ಮನೆ ಕಿಟಕಿಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ಕಂಡು ಗಾಬರಿಯಿಂದ ಓಡಿದೆ. ಮಹಡಿ ಏರಿ ಮನೆ ಬಾಗಿಲು ಒಡೆಯುವ ಹೊತ್ತಿಗೆ ಉರಿಯುತ್ತಿದ್ದ ಬೆಂಕಿಯಲ್ಲಿ ಮೂರು ಜೀವ ಕಮರಿ ಹೋಗಿದ್ದವು...’

ಅಗ್ನಿ ದುರಂತ ಸಂಭವಿಸಿದಾಗ ಮನೆಯೊಳಗೆ ಬಂದಿಯಾಗಿದ್ದವರನ್ನು ರಕ್ಷಿಸಲು ಪ್ರಯತ್ನಿಸಿ ವಿಫಲರಾದ ಸತ್ಯನಾರಾಯಣ ಘಟನೆಯ ಬಗ್ಗೆ ವಿವರಿಸುತ್ತ ಕಣ್ಣೀರು ಒರೆಸಿಕೊಂಡರು. ಸುತ್ತ ನೆರೆದಿದ್ದ ಸಂಬಂಧಿಕರು ಅವರನ್ನು ಸಂತೈಸುತ್ತಿದ್ದರು.

ಗಾರೆಹಟ್ಟಿಯ ಮುಖ್ಯ ರಸ್ತೆಯಲ್ಲಿ 15 ದಿನಗಳ ಹಿಂದೆಯಷ್ಟೇ ಸತ್ಯನಾರಾಯಣ ಅವರು ಟೀ ಅಂಗಡಿ ತೆರೆದಿದ್ದರು. ಅಂಗಡಿಯ ಮುಂಭಾಗದ ಕಟ್ಟಡದ ಮೊದಲ ಮಹಡಿಯಲ್ಲಿ ಅರುಣ್ ಕುಮಾರ್ (43) ಕುಟುಂಬ ವಾಸವಿತ್ತು. ಲತಾ (35) ಮತ್ತು ಪುತ್ರಿ ಅಮೃತಾ (12) ಅವರ ಮುಖ ಪರಿಚಯ ಮಾತ್ರ ಇವರಿಗಿತ್ತು. ಕಣ್ಣೆದುರು ನಡೆದ ದುರಂತ ಇವರನ್ನು ವಿಚಲಿತರನ್ನಾಗಿ ಮಾಡಿತ್ತು.

‘ಮಗಳಿಗೆ ಏಟು ಕೊಡುತ್ತಿರಬೇಕೆಂದು ಅಳುವನ್ನು ಉಪೇಕ್ಷೆ ಮಾಡಿದೆ. ಹೊಗೆ ಬರುತ್ತಿರುವುದನ್ನು ನೋಡಿದಾಗ ದುರಂತ ಸಂಭವಿಸಿದ ಅನುಮಾನ ಬಂದಿತು. ತಕ್ಷಣ ಮನೆಯ ಬಳಿಗೆ ತೆರಳಿ ಬಾಗಿಲು ತೆರೆಯಲು ಪ್ರಯತ್ನಿಸಿದೆವು. ಒಳಗೆ ಬೋಲ್ಟ್ ಹಾಕಿದ್ದರಿಂದ ಪ್ರಯತ್ನ ವಿಫಲವಾಯಿತು. ಕಲ್ಲು ತಂದು ಬಾಗಿಲು ತೆರೆಯುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು’ ಎಂದು ಗದ್ಗದಿತರಾದರು.

ಮನೆ ಹೊರಗಿದ್ದ ತಾಯಿ:ಎರಡು ತಿಂಗಳಿಂದ ಈಚೆಗೆ ಅರುಣ್ ಮನೆಯಲ್ಲಿ ಇರುತ್ತಿರಲಿಲ್ಲ. ಹೀಗಾಗಿ, ಲತಾ ಅವರೊಂದಿಗೆ ತಾಯಿ ಪದ್ಮಮ್ಮ ವಾಸವಾಗಿದ್ದರು. ಎಂದಿನಂತೆ ಬೆಳಿಗ್ಗೆ 6.30ಕ್ಕೆ ಅವರು ವಾಯು ವಿಹಾರಕ್ಕೆ ಹೋಗಿದ್ದರು. ಅತ್ತೆ ಹೊರ ಹೋಗುತ್ತಿದ್ದಂತೆ ಅರುಣ್ ಮನೆಯೊಳಗೆ ಪ್ರವೇಶಿಸಿದ್ದರು. ವಾಯು ವಿಹಾರ ಮುಗಿಸಿಕೊಂಡು ಮನೆಗೆ ಮರಳುವ ವೇಳೆಗೆ ದುರಂತ ಸಂಭವಿಸಿಬಿಟ್ಟಿತ್ತು. ಮಗಳು ಹಾಗೂ ಮೊಮ್ಮಗಳನ್ನು ಕಳೆದುಕೊಂಡ ಅವರು ಶೋಕ ಸಾಗರದಲ್ಲಿ ಮುಳುಗಿದರು.

ಚಿತ್ರದುರ್ಗ ತಾಲ್ಲೂಕಿನ ತೋಪಮಾಳಿಗೆ ಗ್ರಾಮದ ಲತಾ ಹಾಗೂ ಹಿರಿಯೂರು ತಾಲ್ಲೂಕು ತಾಳವಟ್ಟಿಯ ಅರುಣ್ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಯ ಏಕೈಕ ಪುತ್ರಿ ಅಮೃತಾ, 6ನೇ ತರಗತಿವಿದ್ಯಾರ್ಥಿನಿ. ಖಾಸಗಿ ಬಸ್ ಏಜೆಂಟ್ ಆಗಿ ಅರುಣ್ ಕೆಲಸ ಮಾಡುತ್ತಿದ್ದರೆ, ಶ್ಲೋಕ ಆಸ್ಪತ್ರೆಯಲ್ಲಿ ಲತಾ ಶುಶ್ರೂಷಕಿಯಾಗಿದ್ದರು. ಕಾವಾಡಿಗರಹಟ್ಟಿಯಲ್ಲಿದ್ದ ಕುಟುಂಬ ಎರಡು ತಿಂಗಳ ಹಿಂದೆಯಷ್ಟೇ ಗಾರೆಹಟ್ಟಿಗೆ ಸ್ಥಳಾಂತರಗೊಂಡಿತ್ತು.

ಕೌಟುಂಬಿಕ ಕಲಹ:ವೈವಾಹಿಕ ಜೀವನದ ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಈಚೆಗೆ ವೈಮನಸು ಉಂಟಾಗಿತ್ತು. ವಿಚ್ಛೇದನ ಪಡೆಯಲು ಇಬ್ಬರು ಮುಂದಾಗಿದ್ದರು. ಕುಟುಂಬದ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ ಮನವೊಲಿಸಲು ಪ್ರಯತ್ನಿಸಿದ್ದರು. ಬಸ್ ಅಪಘಾತದಲ್ಲಿ ಅರುಣ್ ಕಾಲುಬೆರಳು ಕಳೆದುಕೊಂಡ ಬಳಿಕ ದಂಪತಿಯ ನಡುವೆ ಇನ್ನಷ್ಟು ವೈಮನಸು ಹೆಚ್ಚಾಗಿತ್ತು. ಹೀಗಾಗಿ, ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಬೆಂಕಿ ಹೊತ್ತಿ ಉರಿಯುತ್ತಿದ್ದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿನಂದಿಸಲು ಪ್ರಯತ್ನಿಸಿದರು. ಅರ್ಧ ಗಂಟೆ ನಿರಂತರವಾಗಿ ನಡೆದ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಆರಿಸಲಾಯಿತು. ಸುಟ್ಟು ಕರಕಲಾಗಿದ್ದ ಮೂರು ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿ, ಸಾಕ್ಷ್ಯ ಸಂಗ್ರಹಿಸಿದರು.

‘ಮನೆಯಲ್ಲಿ ಪೆಟ್ರೋಲ್ ವಾಸನೆ ಬರುತ್ತಿದೆ. ಇಂಧನ ಸುರಿದು ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು.

ಅಗ್ನಿ ಆಕಸ್ಮಿಕ– ಎಸ್ಪಿ:ಅಡುಗೆ ಅನಿಲ ಸೋರಿಕೆ ಅಥವಾ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆಕಸ್ಮಿಕವೋ, ಪೂರ್ವನಿಯೋಜಿತ ಕೃತ್ಯವೋ ಎಂಬುದು ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಮಾಹಿತಿ ನೀಡಿದರು.

‘ದಂಪತಿಯ ನಡುವೆ ಕೌಟುಂಬಿಕ ಕಲಹವಿತ್ತು ಎಂಬ ಅಂಶ ಗಮನಕ್ಕೆ ಬಂದಿದೆ. ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕಿ ವಿಶ್ಲೇಷಣೆ ಮಾಡಬೇಕಿದೆ. ಕೋಟೆ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.