ಮಂಗಳವಾರ, ಜನವರಿ 19, 2021
27 °C

ಅನಧಿಕೃತ ಕಟ್ಟಡ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಪಟ್ಟಣದ ಹೃದಯ ಭಾಗದ ವೃತ್ತ (ಚನ್ನಜ್ಜಿ ಸರ್ಕಲ್)ದಲ್ಲಿ ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡವನ್ನು ಶನಿವಾರ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತು.

ಜಿಲ್ಲಾ ರಸ್ತೆಗೆ ಸೇರಬೇಕಾದ ರಸ್ತೆಯ ಬದಿಯಲ್ಲಿಯೇ ಹಿಂದೆ ಕಟ್ಟಡವನ್ನು ಹೊಂದಿದ್ದ ಮಾಲೀಕರು ಮತ್ತೆ ಮಳಿಗೆಗಳನ್ನು ಕಟ್ಟುತ್ತಿದ್ದರು. ಇದನ್ನು ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊಲೀಸ್‌ ಬಂದೋಬಸ್ತ್‌ನಲ್ಲಿ ಕಟ್ಟಡವನ್ನು ತೆರವುಗೊಳಿಸಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಪ್ಪ, ಸಹಾಯಕ ಎಂಜಿನಿಯರ್ ಜಯಣ್ಣ, ಪಿಎಸ್ಐ ರಾಜು, ಪಿಡಿಒ ಶಿವಪ್ಪ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.