ಎಲ್ಲಾ ಸರ್ಕಾರಿ ನೌಕರರಿಗೆ, ನಿವೃತ್ತ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದ್ದು, ಆಗಸ್ಟ್ 1ರಿಂದ ಅನ್ವಯವಾಗುವಂತೆ ವೇತನ ಮತ್ತು ಭತ್ಯೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಆದರೆ 2022 ಜುಲೈ 1ರಿಂದ 2024 ಜುಲೈ 31ರ ಅವಧಿಯಲ್ಲಿ ನಿವೃತ್ತರಾಗಿರುವ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯ ಸೌಲಭ್ಯದಿಂದ ವಂಚನೆಯಾಗಿದ್ದು, ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ಅಧ್ಯಕ್ಷ ಸಿ.ಆರ್. ಏಕಾಂತಪ್ಪ ಒತ್ತಾಯಿಸಿದರು.