ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖ’

Published 10 ಮೇ 2024, 16:13 IST
Last Updated 10 ಮೇ 2024, 16:13 IST
ಅಕ್ಷರ ಗಾತ್ರ

ಹಿರಿಯೂರು: ‘ಈಚಿನ ವರ್ಷಗಳಲ್ಲಿ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗಿರದೆ ದೇಶದ ಅಭಿವೃದ್ಧಿಗೆ ಬೇರೆಬೇರೆ ಕ್ಷೇತ್ರಗಳ ಮೂಲಕ ಉನ್ನತ ಕೊಡುಗೆ ನೀಡಿದ್ದಾರೆ’ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು.

ನಗರದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾ ಸಂಘದಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿ ತುಂಬಾ ಅರ್ಥಗರ್ಭಿತವಾಗಿದೆ. ತಾನು ಹುಟ್ಟಿದ, ಮದುವೆಯಾಗಿ ಹೋದ ಮನೆಗಳ ನಿರ್ವಹಣೆಯಿಂದ ಆರಂಭಿಸಿ ಸಮಾಜವನ್ನು ತಿದ್ದಿ, ತೀಡಿ ಸರಿದಾರಿಗೆ ತರುವ ಕೆಲಸದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಹೆಣ್ಣು ಅಡುಗೆ ಮನೆಯಲ್ಲಿರಲು ಯೋಗ್ಯಳು ಎಂಬ ಮಾತು ಅರ್ಥ ಕಳೆದುಕೊಂಡಿದೆ. ಮನೆಯಿಂದ ಆಚೆಗೆ ತನ್ನ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಮಹಿಳೆಯರು ಸಾಬೀತು ಮಾಡಿದ್ದಾರೆ. ಒಂದು ಜೀವವನ್ನು ಸೃಷ್ಟಿಸುವ ಶಕ್ತಿ ಹೊಂದಿರುವ ಮಹಿಳೆ ತಾನು ಹೆಣ್ಣು ಎಂಬುದಕ್ಕೆ ಗರ್ವ ಪಡಬೇಕು’ ಎಂದು ಅವರು ತಿಳಿಸಿದರು.

ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಅಧ್ಯಕ್ಷೆ ಮಂಜಮ್ಮ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ದೇವರಾಜ ಮೂರ್ತಿ, ಜಾನಪದ ಪರಿಷತ್ ಅಧ್ಯಕ್ಷ ಸಕ್ಕರ ರಂಗಸ್ವಾಮಿ, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ನಿಜಲಿಂಗಪ್ಪ, ಸಂಗೀತ ವಿದ್ವಾನ್ ಆರ್. ತಿಪ್ಪೇಸ್ವಾಮಿ, ಸಂಗೀತ ವಿದುಷಿ ಜಗದಾಂಬ, ಬಿ.ಕೆ. ನಾಗಣ್ಣ, ಆರ್.ಪ್ರಕಾಶ್ ಕುಮಾರ್, ಮಹಾಸ್ವಾಮಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಹಿಳಾ ಸಾಧಕಿಯರಾದ ಸುಲೋಚನಮ್ಮ, ಶಶಿಕಲಾ ರವಿಶಂಕರ್, ಶಶಿಪ್ರಕಾಶ್, ಗೀತಾ ರಾಧಾಕೃಷ್ಣ, ಎನ್.ರೇಖಾ, ಕೃಷ್ಣ ಕುಮಾರಿ, ವಿದುಷಿ ತ್ರಿವೇಣಿ, ನಾಗಸುಂದರಮ್ಮ ಮತ್ತು ಮಂಜಮ್ಮ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT