ಮಂಗಳವಾರ, ಜನವರಿ 19, 2021
27 °C

ಜಿಲ್ಲಾ ಯುವ ಕಾಂಗ್ರೆಸ್‌ಗೆ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಆನ್‌ಲೈನ್‌ ಮತದಾನ ನಡೆದಿದ್ದು, ಶೇ 40ರಷ್ಟು ಸದಸ್ಯರು ಹಕ್ಕು ಚಲಾವಣೆ ಮಾಡಿದ್ದಾರೆ. ಇದೇ ವೇಳೆ ರಾಜ್ಯ ಯುವ ಕಾಂಗ್ರೆಸ್‌ಗೂ ಮತದಾನ ನಡೆಯಿತು.

ಚಿತ್ರದುರ್ಗ ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಭಾನುವಾರ ಮತದಾನ ನಿಗದಿಯಾಗಿತ್ತು. ಉಳಿದ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳಲ್ಲಿ ಚುನಾವಣೆ ನಡೆಯಲಿದೆ. ಮತದಾನಕ್ಕೆ ಅರ್ಹತೆ ಪಡೆದಿದ್ದ 16 ಸಾವಿರ ಸದಸ್ಯರಲ್ಲಿ 5,576 ಜನರು ಮತದಾನ ಮಾಡಿದರು.

ಮತದಾನಕ್ಕೆ ಕಾಂಗ್ರೆಸ್ ಪಕ್ಷ ಆ್ಯಪ್‌ ರೂಪಿಸಿತ್ತು. ರಾಜ್ಯ ಯುವ ಕಾಂಗ್ರೆಸ್‌, ಬ್ಲಾಕ್ ಕಾಂಗ್ರೆಸ್‌ ಸೇರಿ ಒಬ್ಬರು ನಾಲ್ಕು ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಒಂದು ಮೊಬೈಲ್‌ ಫೋನ್‌ನಲ್ಲಿ ಗರಿಷ್ಠ ಆರು ಜನರು ಮಾತ್ರ ಹಕ್ಕು ಚಲಾವಣೆ ಮಾಡಬಹುದಾಗಿತ್ತು. ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿತ್ತು. ತಾಂತ್ರಿಕ ತೊಂದರೆಯಿಂದ ಎರಡು ಗಂಟೆ ಮತದಾನ ಸ್ಥಗಿತವಾಗಿದ್ದರಿಂದ ಸಂಜೆ 6ರವರೆಗೆ ಕಾಲಾವಕಾಶ ಕಲ್ಪಿಸಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ 12 ಜನರು ಕಣದಲ್ಲಿದ್ದರು. ಆನ್‌ಲೈನ್‌ ಮೂಲಕವೇ ಮತದಾರನ್ನು ಸಂಪರ್ಕಿಸಿ ಮತಯಾಚನೆ ಮಾಡಿದ್ದರು. ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉಳಿದ ಹುದ್ದೆಗಳಿಗೆ ಇತರರು ಆಯ್ಕೆಯಾಗುತ್ತಾರೆ. 21ರಿಂದ 35 ವರ್ಷದ ಒಳಗಿನ 21 ಸಾವಿರ ಸದಸ್ಯರನ್ನು ಯುವ ಕಾಂಗ್ರೆಸ್ ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು