ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 'ದೇಶ ಮೊದಲು ಸಂವಾದ' ಸರಣಿ

Last Updated 29 ಆಗಸ್ಟ್ 2020, 20:13 IST
ಅಕ್ಷರ ಗಾತ್ರ

ಬೆಂಗಳೂರು: ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿರುವ 'ದೇಶ ಮೊದಲು ಸಂವಾದ'ಗಳ ಸರಣಿ ಕಾರ್ಯಕ್ರಮ ಉದ್ಘಾಟನೆ ಆ.30ರಂದು ಸಂಜೆ 4.30ಕ್ಕೆ ಆನ್‍ಲೈನ್ ಮೂಲಕ ನಡೆಯಲಿದೆ.

ಸಂವಾದ ಸರಣಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಚಿವ ಹರ್ಷವರ್ಧನ್ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ನಾರಾಯಣ ಹೆಲ್ತ್ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜುನಾಥ್ ಭಾಗವಹಿಸಿಲಿದ್ದು, ಸೋಶಿಯಲ್ ಇನೊವೇಟರ್ ಹಾಗೂ ನಾಯಕತ್ವ ತರಬೇತುದಾರ ಆರ್.ಬಾಲಸುಬ್ರಹ್ಮಣ್ಯಂ ಅವರು 'ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿನ ನಾಯಕತ್ವ' ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮವನ್ನುhttps://www.youtube.com/c/ ananthkumar_bjp, https://www.facebook.com/ AnanthKumar.Pratishthana ಮೂಲಕ ವೀಕ್ಷಿಸಬಹುದು.
***
ಇಂದು ಸಂಗೀತ ಕಾರ್ಯಕ್ರಮ

ಬೆಂಗಳೂರು: ವಿದ್ಯಾರಣ್ಯ ಯುವ ಸಂಘದಿಂದ ಆಯೋಜಿಸಿರುವ ಬೆಂಗಳೂರು ಗಣೇಶ ಉತ್ಸವದ (ಬಿಜಿಯು) ಒಂಬತ್ತನೇ ದಿನವಾದ ಆ.30ರಂದು ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಿರಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ಮತ್ತು ಪ್ರಸಿದ್ಧ ಗಾಯಕರಿಂದ ಗಾನ ವೈಭವ ನಡೆಯಲಿದೆ. ಖ್ಯಾತ ಗಾಯಕರಾದ ನರಸಿಂಹ ನಾಯಕ್ ಪುತ್ತೂರು, ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಚಂದನ, ಅನನ್ಯಾ ಭಟ್, ಶುಭ ರಾಘವೇಂದ್ರ, ಮನೋಜ್ ವಸಿಷ್ಠ, ರವೀಂದ್ರ ನಾಥ್, ಅಂಜನ ಪದ್ಮನಾಭನ್, ಬದರಿ ಪ್ರಸಾದ್, ಸಂತೋಷ್ ವೆಂಕಿ, ಚೈತ್ರಾ ಎಚ್.ಜಿ ಅವರು ಮಧುರ ಗೀತೆಗಳನ್ನು ಹಾಡಲಿದ್ದಾರೆ.

ಈ ಸಾಂಸ್ಕೃತಿಕ ಕಾರ್ಯಕ್ರಮಗಳ ನೇರಪ್ರಸಾರವನ್ನು facebook.com/BengaluruGaneshUtsava ಮತ್ತುyoutube.com/user/BengaluruGaneshUtsav ಮೂಲಕ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT