ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ಹೆದರಿ ಮೊಬೈಲ್‌ ಕೊರಿಯರ್ ಮಾಡಿದ ವಿದೇಶಿಗರು!

Last Updated 10 ಡಿಸೆಂಬರ್ 2019, 15:31 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಹಿಂದೂ ಮಹಾಸಭಾ ಗಣಪತಿಮೆರವಣಿಗೆ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರ ಮೊಬೈಲ್‌ಗಳನ್ನೇಎಗರಿಸಿದ್ದ ಆರೋಪಿಗಳು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ. ಆರೋಪಿಗಳ ಬಳಿ ಮೊಬೈಲ್‌ ಖರೀದಿಸಿದವರುದುಬೈನಿಂದಲೇಕೊರಿಯರ್ ಮೂಲಕ ಮೊಬೈಲ್ ಹಿಂದಿರುಗಿಸುತ್ತಿದ್ದಾರೆ!

ಮೆರವಣಿಗೆ ವೇಳೆ ಪೊಲಿಸರ 24 ಮೊಬೈಲ್‍ಗಳನ್ನು ಎಗರಿಸಿದ್ದರು.ದೊಡ್ಡಪೇಟೆ ಪೊಲೀಸ್ ಠಾಣೆ ಸಿಪಿಐ ಆರ್.ವಸಂತ ಕುಮಾರ್ ನೇತೃತ್ವದತಂಡ ಒಂದು ತಿಂಗಳ ಕಾರ್ಯಾಚರಣೆ ಬಳಿಕ ಪ್ರಮುಖ ಆರೋಪಿ ಕಾರ್ತಿಕ್ (27)ನನ್ನು ವಶಕ್ಕೆ ಪಡೆದಿದ್ದರು. ಆತ ನೀಡಿದ ಮಾಹಿತಿ ಮೇಲೆ ಆರೋಪಿಗಳಿಂದ ಮೊಬೈಲ್ಖರೀದಿಸಿದವರಿಗೆ ಕರೆ ಮಾಡಲಾಗಿತ್ತು.ಸ್ಥಳೀಯವಾಗಿ ಬಳಕೆಯಲ್ಲಿದ್ದ 13 ಸೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಮೊಬೈಲ್‍ಗಳು ದುಬೈನಿಂದ ಪಾರ್ಸಲ್ ಮಾಡಲಾಗಿದೆ.ಅವು ಕೆಲವು ದಿನಗಳಲ್ಲಿಪೊಲೀಸರ ಕೈಸೇರಲಿವೆ.

ಕದ್ದ ಮೊಬೈಲ್‍ಗಳನ್ನು ಪ್ರವಾಸಿ ತಾಣಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದ.ಮನೆಗೆ ಹೋಗಲು ದುಡ್ಡಿಲ್ಲ. ನನ್ನ ಮೊಬೈಲ್ ಖರೀದಿಸಿ ಎಂದು ಭಾವನಾತ್ಮಕವಾಗಿ ನಂಬಿಸಿ ಅವರನ್ನೂ ಯಾಮಾರಿಸುತ್ತಿದ್ದ. ಆತನಿಂದ ಕೆಲವು ವಿದೇಶಿಗರೂ ಖರೀದಿಸುತ್ತಿದ್ದರು. ಕದ್ದ ಫೋನ್‍ಗಳ ಇಎಂಐನಂಬರ್ ಸಹ ಬದಲಿಸುತ್ತಿದ್ದ.

ಕಾರ್ತಿಕ್ ವಿರುದ್ಧ ತುಮಕೂರಿನಲ್ಲಿ ನಾಲ್ಕು ಹಾಗೂ ಹಾಸನದಲ್ಲಿ ಒಂದು ಪ್ರಕರಣ ದಾಖಲಾಗಿವೆ. ಆತ ಐಷಾರಾಮಿ ಬದುಕು ಸಾಗಿಸಲು ತಂಡ ಕಟ್ಟಿಕೊಂಡು ಬೈಕ್ ಮತ್ತು ಮೊಬೈಲ್ ಕಳವು ಮಾಡುತ್ತಿದ್ದ. ಕಳವು ಮಾಡುವುದಕ್ಕಾಗಿಯೇ ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ. ಖಾಸಗಿ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ದೇವಸ್ಥಾನದ ಹುಂಡಿ ಒಡೆದು ಕಳವು ಮಾಡಿದ ಆರೋಪವೂ ಆತನ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT