ಭಾನುವಾರ, ಜನವರಿ 24, 2021
18 °C
19 ವಾಹನಗಳಿಗೆ ಚಾಲನೆ ನೀಡಿದ ಪೊಲೀಸ್ ಕಮಿಷನರ್

112 ತುರ್ತು ಸಹಾಯವಾಣಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ತುರ್ತು ಸೇವೆಗಾಗಿ ದೇಶದಾದ್ಯಂತ ಜಾರಿಗೊಳ್ಳುತ್ತಿರುವ 112 ತುರ್ತು ಸಹಾಯವಾಣಿ ಸೇವೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಚಾಲನೆ ನೀಡಲಾಯಿತು.

ಮಂಗಳೂರು ಪೊಲೀಸ್ ಕಮಿಷನರ್ ವಿಕಾಶ್‌ ಕುಮಾರ್ ವಿಕಾಶ್ ಸೋಮವಾರ ತಮ್ಮ ಕಚೇರಿ ಎದುರು 112 ತುರ್ತು ಸೇವೆ ಸಹಾಯವಾಣಿಗೆ ನಿಯೋಜನೆಗೊಂಡಿರುವ 19 ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ ‘112’ ಜಾರಿಗೊಳ್ಳುತ್ತಿದೆ. ಅದರಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಈ ಸೇವೆಗೆ ಚಾಲನೆ ನೀಡಲಾಗಿದೆ. ಭಾನುವಾರ ಸೇವೆ ಆರಂಭಗೊಂಡಿತ್ತು. ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ತನಕ ತುರ್ತು ಸೇವೆಗೆ 24 ಕರೆಗಳು ಬಂದಿದ್ದು, ತುರ್ತಾಗಿ ಸ್ಪಂದಿಸಲಾಗಿದೆ ಎಂದು ಅವರು ತಿಳಿಸಿದರು.

112 ಕ್ಕೆ ಕರೆ ಮಾಡಿದರೆ ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ತುರ್ತು ಸೇವೆಗಳು ದೊರೆಯಲಿವೆ. ಈಗ 100ಕ್ಕೆ ಕರೆ ಮಾಡಿದರೂ ಇದು 112 ಸಂಖ್ಯೆಗೆ ಸಂಪರ್ಕಗೊಂಡು ಸೇವೆ ದೊರೆಯುತ್ತದೆ ಎಂದರು.

ಅತ್ಯಂತ ಕಡಿಮೆ ಅವಧಿಯಲ್ಲಿ ಸೇವೆ ಒದಗಿಸುವುದು ಇದರ ಉದ್ದೇಶ. ತುರ್ತುಸೇವೆಯು ದಿನದ 24 ಗಂಟೆಯೂ ದೊರೆಯಲಿದ್ದು, ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಗರಿಷ್ಠ 15ರಿಂದ 30 ನಿಮಿಷಗಳೊಳಗೆ ಸೇವೆ ಒದಗಿಸಲಾಗುವುದು. ಸ್ಥಳ ಸಮೀಪದಲ್ಲಿದ್ದರೆ ಹೆಚ್ಚು ಬೇಗನೆ ಸೇವೆ ದೊರೆಯಲಿದೆ ಎಂದರು.

ತುರ್ತು ಸೇವೆಗೆ ನಿಯೋಜನೆಗೊಂಡ 19 ವಾಹನಗಳು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ರ್‍ಯಾಲಿ ನಡೆಸಿದವು. ಡಿಸಿಪಿಗಳಾದ ವಿನಯ ಗಾಂವ್ಕರ್, ಹರಿರಾಮ್ ಶಂಕರ್, ಸಂಚಾರ ವಿಭಾಗದ ಎಸಿಪಿಗಳಾದ ಎಂ.ಎ. ನಟರಾಜ್, ಉಪಾಸೆ, ಇನ್‌ಸ್ಪೆಕ್ಟರ್ ರಂಗೇಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.