ಭಾನುವಾರ, ಅಕ್ಟೋಬರ್ 25, 2020
28 °C

ಪೆಟ್ರೋಲ್‌ ಬಂಕ್‌ನಲ್ಲಿ ಕಳವು: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಪಂಪ್‌ವೆಲ್‌ ಉಜ್ಜೋಡಿಯ ಪೆಟ್ರೋಲ್‌ ಬಂಕ್‌ನಲ್ಲಿ ಹಣ ಕಳವು ಮಾಡಿದ ಮೂವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೆ.ಸಿ.ರೋಡ್‌ನ ಮೊಹಮ್ಮದ್ ಸುಹೈಲ್‌, ತಲಪಾಡಿ ಕೆ.ಸಿ. ನಗರದ ಆಶಿಕ್ ಅಲಿಯಾಸ್‌ ಅಹ್ಮದ್‌ ಆಶಿಕ್‌ ಅಲಿಯಾಸ್‌ ಕೊಲ್ಲೇ ಆಶಿಕ್‌ ಅಲಿಯಾ ಇರ್ಫಾನ್‌, ಫಳ್ನೀರ್‌ ರಸ್ತೆಯ ಮಹಮ್ಮದ್‌ ಅರ್ಫಾನ್‌ ಬಂಧಿತ ಆರೋಪಿಗಳು. ಇವರಿಂದ ಬೈಕ್‌, ನಗದು ಹಾಗೂ ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ.

ಸೆಪ್ಟೆಂಬರ್‌ 20 ರಂದು ರಾತ್ರಿ ಉಜ್ಜೋಡಿಯ ದಾಮೋದರ ಸುವರ್ಣ ಪೆಟ್ರೋಲ್‌ ಬಂಕ್‌ನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಇವರು, ಶಟರ್‌ ಮುರಿದು ಹಣ ಕಳವು ಮಾಡಿದ್ದರು. ಬಂಧಿತ ಆರೋಪಿಗಳು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳವು: ಮೂವರ ಬಂಧನ

ಮಂಗಳೂರು: ನಗರದ ಶಿವಬಾಗ್‌ನ ತಾರೆತೋಟದ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಿದ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಹಾಸನ ಹೊಳೆನರಸೀಪುರ ಶಿವಗಾಮಿ, ಮಂಜು, ಲಚಿಮಿ ಬಂಧಿತರು. ಆರೋಪಿಗಳಿಂದ ಕಳವಾದ ಸ್ವತ್ತು ಮತ್ತು ಕಳವು ಮಾಡಲು ಉಪಯೋಗಿಸಿದ ಸಾಧನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಬಾಗ್‌ ತಾರೆತೋಟದ ಬಳಿ ನಿವಾಸಿಯೊಬ್ಬರು ಸೆಪ್ಟೆಂಬರ್‌ 13ರಂದು ಹಗಲು ಹೊತ್ತು ಮನೆಗೆ ಬೀಗ ಹಾಕಿ, ಹೊರಗೆ ಹೋದ ಸಂದರ್ಭದಲ್ಲಿ ಕಳ್ಳರು ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ₹18 ಸಾವಿರ ನಗದು ಕಳವು ಮಾಡಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.