ಶುಕ್ರವಾರ, ಜುಲೈ 30, 2021
25 °C

ಕೋವಿಡ್: ಕರಾವಳಿಯಲ್ಲಿ 15 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟಿರುವ 14 ಮಂದಿಗೆ ಕೋವಿಡ್–19 ಇರುವುದು ಸೋಮವಾರ ಖಚಿತವಾಗಿದೆ. ಜಿಲ್ಲೆಯಲ್ಲಿ ಸೋಮವಾರ 542 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 637 ಮಂದಿ ಗುಣಮುಖರಾಗಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ 117 ಮಂದಿಗೆ ಕೋವಿಡ್ ದೃಢವಾಗಿದ್ದು, 322 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟ ಒಬ್ಬರಿಗೆ ಕೋವಿಡ್–19 ಖಚಿತವಾಗಿದೆ. ಸದ್ಯ 1,756 ಸಕ್ರಿಯ ಪ್ರಕರಣಗಳಿವೆ.

ಕಾಸರಗೋಡು: ಜಿಲ್ಲೆಯಲ್ಲಿ 319 ಮಂದಿಗೆ ಸೋಮವಾರ ಸೋಂಕು ದೃಢಪಟ್ಟಿದ್ದು, 396 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆ ಯಲ್ಲಿ 3,415 ಸಕ್ರಿಯ ಪ್ರಕರಣಗಳಿವೆ.

ಕಪ್ಪು ಶಿಲೀಂಧ್ರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರದ ಹೊಸ ಪ್ರಕರಣಗಳು ಸೋಮವಾರ ಪತ್ತೆಯಾಗಿಲ್ಲ. ಇಬ್ಬರು ಗುಣಮುಖರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ.

ಸದ್ಯ ದಕ್ಷಿಣ ಕನ್ನಡ ಏಳು ಹಾಗೂ ಬೇರೆ ಜಿಲ್ಲೆಗಳ 27 ಸೇರಿದಂತೆ ಒಟ್ಟು 34 ಸಕ್ರಿಯ ಪ್ರಕರಣಗಳಿವೆ.

ಇವರೆಗೆ ಒಟ್ಟು 30 ಮಂದಿ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ ನಾಲ್ವರು ಹಾಗೂ ಬೇರೆ ಜಿಲ್ಲೆಗಳ 14 ಜನ ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು