ಭಾನುವಾರ, ಮೇ 16, 2021
22 °C

ಹಳೆಯಂಗಡಿ ಸಿಡಿಲಿನ ಆಘಾತ; ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ್ಕಿ (ದಕ್ಷಿಣ ಕನ್ನಡ):  ಬೊಳ್ಳೂರಿನ ಇಂದಿರಾನಗರದಲ್ಲಿ ಸಿಡಿಲಿನ ಆಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರಲ್ಲಿ ಒಬ್ಬ ಬಾಲಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ.

ಇಂದಿರಾನಗರದ ಬೊಳ್ಳೂರು  ಮಸೀದಿ ಹಿಂಭಾಗದ ಖಾಸಗಿ ಜಮೀನಿನಲ್ಲಿ ಆಟವಾಡುತ್ತಿದ್ದ ಮನ್ಸೂರ್ ಎಂಬುವರ ಎರಡನೇ ಪುತ್ರ ನಿಹಾನ್ (5) ಮೃತಪಟ್ಟಿದ್ದಾನೆ. ಗಂಗಾವತಿ ಮೂಲದ ದುರ್ಗಪ್ಪ ಎಂಬುವವರ ಮಗ ಮಾರುತೇಶ್ (6) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. 

ಮಂಗಳವಾರ ಸಂಜೆ ಮನೆಯ ಹತ್ತಿರ ಆಟವಾಡುತ್ತಿದ್ದಾಗ ಸಿಡಿಲಿನ ಆಘಾತದಿಂದ  ಮಕ್ಕಳು ಸ್ಥಳದಲ್ಲಿಯೇ ಪ್ರಜ್ಞಾಹೀನರಾಗಿದ್ದರು. ನಂತರ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.