ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯಿಂದ ಸಮಾಜದಲ್ಲಿ ಶಾಂತಿ

ಅಖಿಲ ಭಾರತ ಬ್ಯಾರಿ ಪರಿಷತ್ ನಾಲಾಚರಣೆಯಲ್ಲಿ ಪ್ರಭಾಕರ ಶರ್ಮ
Last Updated 3 ಅಕ್ಟೋಬರ್ 2021, 16:33 IST
ಅಕ್ಷರ ಗಾತ್ರ

ಮಂಗಳೂರು : ‘ಸಮುದಾಯಗಳ ನಡುವಿನ ಪ್ರೀತಿಯಿಂದಾಗಿ ನಾವು ಸಮಾಜದಲ್ಲಿ ಶಾಂತಿ, ಸಮಾಧಾನದಿಂದ ಬಾಳುತ್ತಿದ್ದೇವೆ. ಸೌಹಾರ್ದ ನೆಲೆ ನಿಂತಿದೆ. ಶಿಕ್ಷಣವು ಈ ದಿಸೆಯಲ್ಲಿ ದಾರಿದೀಪವಾಗಿದೆ’ ಎಂದು ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಬ್ಯಾರಿ ಪರಿಷತ್ ಏರ್ಪಡಿಸಿದ್ದ ಬ್ಯಾರಿ ಬಾಸೆರೊ ನಾಲಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ‘ಯಾರು ತಮ್ಮ ಮಾತೃಭಾಷೆ- ಸಂಸ್ಕೃತಿಯನ್ನು ಪ್ರೀತಿಸುತ್ತಾರೋ ಅಂಥವರು ಇನ್ನೊಂದು ಸಮುದಾಯವನ್ನೂ ಪ್ರೀತಿಸುತ್ತಾರೆ’ ಎಂದು ಅವರು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಜಿ.ಎಂ.ಶಾಹುಲ್ ಹಮೀದ್ ಮೆಟ್ರೊ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತವಿಕವಿವಾಗಿ ಮಾತನಾಡಿದರು. ಬ್ಯಾರಿ ಮುಂದಾಳು ಅಬ್ದುಲ್ ಖಾದರ್ ಕೊಣಾಜೆ ಉದ್ಘಾಟಿಸಿದರು. ಬ್ಯಾರಿ ಗಾದೆ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಜೆ. ಹುಸೇನ್ ಪುರಸ್ಕರಿಸಿದರು.

ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಸದಸ್ಯರಾದ ಅಬ್ದಲ್ ಲತೀಫ್ ಕಂದಕ, ಸಂಪಾದಕ ಬಶೀರ್ ಬೈಂಕಪಾಡಿ, ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ವಕೀಲ ರಿಯಾಝ್ ಬಂಟ್ವಾಳ, ಸಾಹಿತಿ ಪೇರೂರು ಜಾರು ಇದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹಕ್, ಗೌರವ ಅಧ್ಯಕ್ಷ ಯೂಸುಫ್ ವಕ್ತಾರ್, ಎಂಜಿನಿಯರ್ ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಹಸನಬ್ಬ ಮೂಡಬಿದ್ರಿ, ಹುಸೈನ್ ಕಾಟಿಪಳ್ಳ, ಇಬ್ರಾಹಿಂ ಬಾತಿಷಾ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT