ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿನ ವಿದ್ಯಾಗಿರಿಯಲ್ಲಿ ನಡೆದ ಎರಡು ದಿನಗಳ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಶನಿವಾರ ಸಮಾಪನಗೊಂಡಿದ್ದು, 2,873 ಉದ್ಯೋಗಾಕಾಂಕ್ಷಿಗಳನ್ನು ಸ್ಥಳದಲ್ಲೇ ನೇಮಕ ಮಾಡಿಕೊಳ್ಳಲಾಯಿತು.

ಭಾಗವಹಿಸಿದ್ದ 288 ಕಂಪನಿಗಳ ಪೈಕಿ 260 ಕಂಪನಿಗಳು 3,734 ಉದ್ಯೋಗಾರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಒಟ್ಟು 14,245 ಅಭ್ಯರ್ಥಿಗಳು 2 ದಿನದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.

ದುಬೈ ಮೂಲದ ಫಾರ್ಚುನ್ ಸಂಸ್ಥೆಯು 5 ಮಂದಿಯನ್ನು ₹ 5 ರಿಂದ ₹ 8 ಲಕ್ಷ ವಾರ್ಷಿಕ ವೇತನದ ಹುದ್ದೆಗೆ ಆಯ್ಕೆ ಮಾಡಿದೆ. 25 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ನಾರಾಯಣ ಹೃದಯಾಲಯವು 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಂತಿಮ ಸುತ್ತಿನ ಸಂದರ್ಶನಕ್ಕೆ 28 ಮಂದಿಯನ್ನು ಆಯ್ಕೆಗೊಳಿಸಿದೆ.

ಝೀ ಎಂಟರ್ಟೈನ್ಮೆಂಟ್ ಕಂಪನಿಯು ಅಂತಿಮ ಸುತ್ತಿಗೆ 11 ಮಂದಿಯನ್ನು, ಸೌದಿ ಅರೇಬಿಯ ಮೂಲದ ಎಕ್ಸ್ಪರ್ಟೈಸ್ ಕಂಪನಿಯು 37 ಮಂದಿಯನ್ನು, ಮುಂಬೈ ಮೂಲದ ಆಲ್ಕಾರ್ಗೊ ಲಾಜಿಸ್ಟಿಕ್ಸ್ ₹ 3 ರಿಂದ 5 ಲಕ್ಷದವರೆಗಿನ ವಾರ್ಷಿಕ ವೇತನವಿರುವ ಹುದ್ದೆಗಳಿಗೆ 9 ಮಂದಿಯನ್ನು ಆಯ್ಕೆ ಮಾಡಿದೆ.

ತೇಜಸ್ವಿನಿ ಗ್ರೂಪ್ಸ್ ವಾರ್ಷಿಕ ₹ 6 ಲಕ್ಷ ವೇತನಕ್ಕೆ 11 ಮಂದಿಯನ್ನು, ಇನ್ಫೊಸಿಸ್ ಬಿಪಿಎಂ ಕಂಪನಿಯು 79 ಅಭ್ಯರ್ಥಿಗಳನ್ನು, ಕೋಡ್ ಯಂಗ್ ಸಂಸ್ಥೆಯು 20 ಅಭ್ಯರ್ಥಿಗಳನ್ನು ₹4.36 ಲಕ್ಷದಿಂದ ₹ 8.36 ಲಕ್ಷದ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ.

ನೂರಾರು ಕಂಪನಿಗಳು ಒಂದೇ ಸೂರಿನಡಿ ಬಂದಿರುವುದರಿಂದ ನಮ್ಮ ಆಸಕ್ತಿಗೆ ತಕ್ಕ ಕಂಪನಿಯಲ್ಲಿ ಸಂದರ್ಶನ ನೀಡಲು ಸಾಧ್ಯವಾಯಿತು. ಗಲ್ಫ್ ದೇಶದ ಎಕ್ಸ್ಪರ್ಟೈಸ್ ಕಂಪನಿಗೆ ಆಯ್ಕೆಯಾಗಿರುವುದರಿಂದ ಕಂಪನಿ ನಡೆಸುವ ತರಬೇತಿ ಅವಧಿಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಲೆಸ್ಟನ್ ಪಿಂಟೊ ಕಾರ್ಕಳ ತಿಳಿಸಿದರು.

ನಾನು ಕೋಡ್ಯಂಗ್ ಕಂಪನಿಗೆ ಆಯ್ಕೆಯಾಗಿರುವುದು ಖುಷಿ ನೀಡಿದೆ. ಈ ಉದ್ಯೋಗ ಮೇಳವು ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ನಾನು ಆಳ್ವಾಸ್ಗೆ ಆಭಾರಿಯಾಗಿದ್ದೇನೆ ಎಂದು ಮೂಡುಬಿದಿರೆಯ ಅನುಶ್ರೀ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.