ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ಅನಂತಾಡಿ ಗ್ರಾಮ ಪಂಚಾಯಿತಿ ಮೈಲಿಗಲ್ಲು

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನ
Last Updated 4 ಮೇ 2022, 19:30 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಒಟ್ಟು 58 ಗ್ರಾಮ ಪಂಚಾಯಿತಿಗಳ ಪೈಕಿ ಕಳೆದ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಅನಂತಾಡಿ ಗ್ರಾಮ ಪಂಚಾಯಿತಿ ಶೇ 191ರಷ್ಟು ವೈಯಕ್ತಿಕ ಮತ್ತು ಸಾಮೂಹಿಕ ಕಾಮಗಾರಿ ನಡೆಸುವ ಮೂಲಕ ಗಮನ ಸೆಳೆದಿದೆ.

ಗೋಳ್ತಮಜಲು ಮತ್ತು ಪುದು ಗ್ರಾಮ ಪಂಚಾಯಿತಿ ಕನಿಷ್ಠ ಶೇ 70ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ. ತಾಲ್ಲೂಕಿನಲ್ಲಿ ಒಟ್ಟು 3,68,947 ಮಾನವ ದಿನ ನಿಗದಿಪಡಿಸಲಾಗಿದ್ದು, ಒಟ್ಟು 3,76,541 ಮಾನವ ದಿನ ಬಳಕೆಯಾಗುವ ಮೂಲಕ ಒಟ್ಟು ಶೇ 102ರಷ್ಟು ಸಾಧನೆ ಮಾಡಿರುವುದಾಗಿ ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ ತಿಳಿಸಿದರು.

1994ರಲ್ಲಿ ಅನಂತಾಡಿ ಗ್ರಾಮ ಪಂಚಾಯಿತಿ ಆರಂಭವಾಗಿದ್ದು, ಕ್ಷೇತ್ರ ವಿಂಗಡಣೆ ಹಿನ್ನೆಲೆಯಲ್ಲಿ 2015ರ ಬಳಿಕ ನೆಟ್ಲಮುಡ್ನೂರು ಗ್ರಾಮ ಪಂಚಾಯಿತಿ ಇಲ್ಲಿಂದ ಪ್ರತ್ಯೇಕಗೊಂಡಿದೆ. ಒಟ್ಟು 7 ಸದಸ್ಯರನ್ನು ಹೊಂದಿರುವ ಅನಂತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 2,947 ಜನಸಂಖ್ಯೆ ಇದೆ. ಇಲ್ಲಿನ ಗೋಳಿಕಟ್ಟೆ ಬಳಿ 22 ಸೆಂಟ್ಸ್ ಸರ್ಕಾರಿ ಜಮೀನಿನಲ್ಲಿ ₹28 ಲಕ್ಷ ವೆಚ್ಚದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಮೂಲಕ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಳೆದ ವರ್ಷ ಕೋವಿಡ್ ಸಂಕಷ್ಟದ ನಡುವೆ ಸುಮಾರು 21 ತೋಡುಗಳ ಹೂಳೆತ್ತುವ ಮೂಲಕ ಜನತೆಗೆ ಉದ್ಯೋಗ ಖಾತರಿ ನೀಡಲಾಗಿದೆ. ಉಳಿದಂತೆ 4 ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿವೆ.

ಸಾರ್ವಜನಿಕ ಬಾವಿ, ಮಳೆನೀರು ಇಂಗಿಸುವಿಕೆ, ಶಾಲಾ ಶೌಚಾಲಯ ನಿರ್ಮಾಣ, ಸ್ಮಶಾನ ನಿಮಾಣ, ತಡೆಗೋಡೆ ರಚನೆ, ಅಂಗನವಾಡಿ ಕೇಂದ್ರ ರಚನೆ, ಕಿಂಡಿ ಅಣೆಕಟ್ಟೆ, ಪೌಷ್ಟಿಕ ತೋಟವನ್ನು ಮಾಡಲು ನರೇಗಾ ಯೋಜನೆಯಿಂದ ಸಾಧ್ಯವಾಗಿದೆ.

ಬಾವಿ, ತೋಟಗಾರಿಕೆ, ದನ, ಹಂದಿ, ಕೋಳಿ ಸಾಕಣೆ, ವಸತಿ ನಿರ್ಮಾಣ, ಕೃಷಿ ಹೊಂಡ, ಎರೆಹುಳು ಗೊಬ್ಬರ ಘಟಕ, ದ್ರವ ತ್ಯಾಜ್ಯ ಗುಂಡಿ ರಚನೆ ಹೀಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 2,586 ವೈಯಕ್ತಿಕ ಕಾಮಗಾರಿ ನಡೆದಿವೆ. ಘನ ತ್ಯಾಜ್ಯ ವಿಲೇವಾರಿಯಲ್ಲಿ ಕೂಡ ಪಂಚಾಯಿತಿ ಎಲ್ಲರಿಗಿಂತ ಮುಂದಿದೆ. ಇಲ್ಲಿನ ಸದಸ್ಯರು ಮತ್ತು ಸಿಬ್ಬಂದಿಯ ಉತ್ಸಾಹ ಮತ್ತು ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಪೂಜಾರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT