ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರನಟ ‘ಅನಂತ’ ಅಭಿನಂದನೆ ಸೆ.3ಕ್ಕೆ

Published 29 ಆಗಸ್ಟ್ 2023, 18:51 IST
Last Updated 29 ಆಗಸ್ಟ್ 2023, 18:51 IST
ಅಕ್ಷರ ಗಾತ್ರ

ಮಂಗಳೂರು: ‘ಲಕ್ಷಾಂತರ ಅಭಿಮಾನಗಳನ್ನು ಹೊಂದಿರುವ ನಟ ಅನಂತನಾಗ್‌ ಅವರಿಗೆ ಸೆಪ್ಟೆಂಬರ್ 4ರಂದು 75ರ ಸಡಗರ. ಈ ಖುಷಿಯನ್ನು ಸಂಭ್ರಮಿಸಲು ಅನಂತನಾಗ್ ಉಪಸ್ಥಿತಿಯಲ್ಲಿ ಸೆ.3ರಂದು ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅನಂತನಾಗ್ ಅಭಿನಂದನಾ ಸಮಿತಿ ಸಂಚಾಲಕ ಗೋಪಿನಾಥ್ ಭಟ್ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 9.30ಕ್ಕೆ ಅನಂತನಾಗ್ ದಂಪತಿಯನ್ನು ಡೊಂಗರಕೇರಿ ಕೆನರಾ ಪ್ರೌಢಶಾಲೆ ಆವರಣದಿಂದ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಗುವುದು. ಹುಲಿವೇಷ, ಚೆಂಡೆ, ವಾದ್ಯ, ಕೊಂಬು ಮೆರವಣಿಗೆಯ ಆಕರ್ಷಣೆಯಾಗಿದೆ’ ಎಂದರು.

10 ಗಂಟೆಗೆ ಉದ್ಘಾಟನೆ, ನಂತರ ರಂಗಭೂಮಿ, ಸಿನಿಮಾ ದಿಗ್ಗಜರು, ಯುವ ಸಮುದಾಯದೊಂದಿಗೆ ಸಂವಹನ ನಡೆಯಲಿದೆ. ಕಾಸರಗೋಡು ಚಿನ್ನ, ಜೋಗಿ, ವಿನು ಬಳಂಜ ಮತ್ತಿತರರು ಭಾಗವಹಿಸುವರು.  ಮಧ್ಯಾಹ್ನ 2 ಗಂಟೆಯಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ಹಾಗೂ ತಂಡದಿಂದ ಅನಂತನಾಗ್ ನಟನೆಯ ಚಿತ್ರದ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯದ ನಂತರ ಸಂಜೆ 6ರಿಂದ 8 ಗಂಟೆಯವರೆಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ಚಿತ್ರನಟ ರಿಷಬ್ ಶೆಟ್ಟಿ, ಕಲಾವಿದ ದೇವಿದಾಸ್ ಕಾಪಿಕಾಡ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಭಾಗವಹಿಸುವರು ಎಂದರು.

ಅನಂತನಾಗ್ ಅವರ ವೃತ್ತಿ ಜೀವನ 50 ವಸಂತಗಳನ್ನು ಕಂಡಿದೆ. ಅವರಿಗೀಗ 75ರ ಹರೆಯ. ಸಾರ್ಥಕ ಬದುಕಿನ ಅಮೃತ ಘಳಿಗೆಯನ್ನು ಅರ್ಥವತ್ತಾಗಿ ಆಚರಿಸಲು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅನಂತನಾಗ್ ಅಭಿನಂದನಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ಪತ್ರಕರ್ತ ಮನೋಹರ ಪ್ರಸಾದ್, ಅಭಿನಂದನಾ ಸಮಿತಿಯ ಗೋಪಾಲಕೃಷ್ಣ ಶೆಟ್ಟಿ, ಗಿರಿಧರ್ ಶೆಟ್ಟಿ, ಕುದ್ರೋಳಿ ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT