ಭಾನುವಾರ, ಡಿಸೆಂಬರ್ 6, 2020
19 °C
ಬಜೆಟ್ ತಯಾರಿಸಲು ಭರತ್‌ ಶೆಟ್ಟಿ ಸೂಚನೆ

ಬೊಂದೆಲ್‌ನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಕಲಾವಿದರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಬೊಂದೆಲ್‌ನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಲಾವಿದರ ಜೊತೆ ಜಿಲ್ಲಾಧಿಕಾರಿಯೊಂದಿಗೆ ವಿಡಿಯೊ ಕಾನ್ಫರೆನ್ಸ್ ಸಭೆ ಮಂಗಳವಾರ ನಡೆಯಿತು.

ರಂಗಮಂದಿರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಬಜೆಟ್ ತಯಾರಿಸಲು ಡಾ.ಭರತ್‌ ಶೆಟ್ಟಿ ಸೂಚಿಸಿದರು.

ಪಾಲಿಕೆ ಸದಸ್ಯ ಲೋಹಿತ್ ಅಮೀನ್, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಮಂಗಳೂರು ರಂಗಭೂಮಿಯ ಗೌರವಾಧ್ಯಕ್ಷ ರಾಮಚಂದ್ರ ಬೈಕಂಪಾಡಿ,ರಂಗಸಂಗಾಂತಿ ಅಧ್ಯಕ್ಷ ಶಶಿರಾಜ್ ಕಾವೂರು, ಸಂಕೇತ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗನ್ ಪವಾರ್, ಸ್ವರೂಪ ಸಮೂಹ ಸಂಸ್ಥೆಯ ಗೋಪಾಡ್ಕರ್, ಪ್ರಸಾದ್ ಆರ್ಟ್ಸ್ ಗ್ಯಾಲರಿಯ ಗಣೇಶ ಸೋಮಯಾಜಿ, ಯಕ್ಷಧ್ರುವ ಪ್ರತಿಷ್ಠಾನದ ಮಂಗಳೂರು ಅಧ್ಯಕ್ಷ ಪ್ರದೀಪ್ ಆಳ್ವ, ತುಳುನಾಟಕ ಕಲಾವಿದ ಮೋಹನ್ ಕೊಪ್ಪಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.