ಉಳ್ಳಾಲ: ಕಾರಿನಲ್ಲಿದ್ದ ಮೂವರ ತಂಡ ಟೋಲ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಘಟನೆ ಸಂಬಂ ಹಲ್ಲೆ ನಡೆಸಿದ ಉಳ್ಳಾಲ ನಿವಾಸಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

ಉತ್ತರಪ್ರದೇಶ ನೋಂದಣಿ ಸಂಖ್ಯೆ ಇದ್ದ ಕಾರೊಂದರಲ್ಲಿ ಮಂಗಳೂರಿನಿಂದ ಕೇರಳದ ಕಡೆಗೆ ಐವರು ಯುವಕರ ತಂಡ ತೆರಳುತ್ತಿತ್ತು. ತಲಪಾಡಿ ಟೋಲ್ ಗೇಟ್ನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ಸಿಟ್ಟಾದ ತಂಡ ಕಾರನ್ನು ನಿಲ್ಲಿಸಿ ಸಿಬ್ಬಂದಿಯತ್ತ ದೌಡಾಯಿಸಿ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಟೋಲ್ ಸಿಬ್ಬಂದಿ ಮನು, ಸುಧಾಮ, ಅಮನ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದವರು ಮೂವರು ಉಳ್ಳಾಲ ನಿವಾಸಿಗಳಾಗಿದ್ದು, ಝುಲ್ಪಾನ್, ನಿಫಾನ್, ಫಯಾಝ್ ಎಂದು ಗುರುತಿಸಲಾಗಿದೆ. ಒಬ್ಬನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.