ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ ಯುಎಇಗೆ ಪ್ರಯಾಣ: ಬಿ.ಆರ್. ಶೆಟ್ಟಿ

ತನಿಖೆಗೆ ಎಲ್ಲ ರೀತಿಯ ಸಹಕಾರ: ಬಿ.ಆರ್. ಶೆಟ್ಟಿ
Last Updated 17 ನವೆಂಬರ್ 2020, 21:22 IST
ಅಕ್ಷರ ಗಾತ್ರ

ಮಂಗಳೂರು: ‘ನನ್ನ ಕಂಪನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸಹಕರಿಸಲು ಶುಕ್ರವಾರ ಯುಎಇಗೆ ಮರಳುತ್ತೇನೆ’ ಎಂದು ಎನ್‌ಎಂಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪನಿಗಳ ಮಾಲೀಕ ಬಿ.ಆರ್. ಶೆಟ್ಟಿ ಹೇಳಿದ್ದಾರೆ.

‘ಯುಎಇಯ ನ್ಯಾಯ ವ್ಯವಸ್ಥೆಯ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಹಾಗೂ ವಂಚನೆ ಮಾಡಿದವರು ಕಾನೂನು ಕ್ರಮಕ್ಕೆ ಗುರಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

‘ಕಂಪನಿಗಳು, ಅವುಗಳ ಉದ್ಯೋಗಿಗಳು, ಷೇರುದಾರರು ಮತ್ತು ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಇತರರಿಗೆ ಆಗಿರಬಹುದಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಪ್ರಾಧಿಕಾರಗಳಿಗೆ ಸಹಕಾರ ನೀಡಲು ನಾನು ಯುಎಇಗೆ ಮರಳುತ್ತಿದ್ದೇನೆ’ ಎಂದು ಶೆಟ್ಟಿ ಹೇಳಿದ್ದಾರೆ.

ಬೆಂಗಳೂರಿನಿಂದ ಯುಎಇಗೆ ತೆರಳುತ್ತಿರುವ ಸಂದರ್ಭದಲ್ಲಿ ಬಿ.ಆರ್. ಶೆಟ್ಟಿ ಅವರಿಗೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ ಎಂಬ ವರದಿಯನ್ನು ಅಲ್ಲಗಳೆದಿರುವ ಅವರು, ‘ನನ್ನ ಪತ್ನಿ ಯುಎಇಗೆ ತೆರಳುತ್ತಿದ್ದು, ಅವಳನ್ನು ಬಿಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದೆ’ ಎಂದಿದ್ದಾರೆ.

‘ಫೆಬ್ರುವರಿಯಲ್ಲಿ ಭಾರತಕ್ಕೆ ಬಂದಿದ್ದೆ. ನನ್ನ ಸಹೋದರನ ನಿಧನದಿಂದಾಗಿ ಮತ್ತಷ್ಟು ಕಾಲ ಇಲ್ಲಿಯೇ ಉಳಿಯುವಂತಾಯಿತು. ನಂತರ ಕೋವಿಡ್–19 ನಿಂದಾಗಿ ಯುಎಇಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT