ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಕಡಲತೀರಕ್ಕೆ ಬೇಕಿದೆ ಜೀವ ರಕ್ಷಕರ ‘ಬಲ’

Published : 7 ಏಪ್ರಿಲ್ 2025, 7:31 IST
Last Updated : 7 ಏಪ್ರಿಲ್ 2025, 7:31 IST
ಫಾಲೋ ಮಾಡಿ
Comments
ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ದೇಶನ ನೀಡುತ್ತಿರುವ ಜೀವರಕ್ಷಕ ಸಿಬ್ಬಂದಿ : ಪ್ರಜಾವಾಣಿ ಚಿತ್ರ
ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ದೇಶನ ನೀಡುತ್ತಿರುವ ಜೀವರಕ್ಷಕ ಸಿಬ್ಬಂದಿ : ಪ್ರಜಾವಾಣಿ ಚಿತ್ರ
ಪ್ರವಾಸಿಗರು ಜೀವ ರಕ್ಷಕ ಸಿಬ್ಬಂದಿ ನೀಡುವ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಮ್ಮನ್ನು ನಿರ್ಲಕ್ಷಿಸಿ ನೀರಿಗಿಳಿದು ಅಪಾಯಕ್ಕೆ ಸಿಲುಕುತ್ತಾರೆ. ಇದು ಬೇಸರದ ಸಂಗತಿ.
ದಿನಕರ್ ಜೀವ ರಕ್ಷಕ ಸಿಬ್ಬಂದಿ
ಮೋಜು ಮಸ್ತಿಯ ಮೂಡ್‌ನಲ್ಲಿ ಬರುತ್ತಾರೆ. ಕೆಲವರು ವಿಪರೀತ ಕುಡಿದು ಬಂದು ನೀರಿಗಿಳಿಯುತ್ತಾರೆ. ನಾವು ತಿಳಿ ಹೇಳಿದರೆ ನಮ್ಮ ಮೇಲೆ ತಿರುಗಿ ಬೀಳುತ್ತಾರೆ. ನಾವು ಹೇಳುವ ಸುರಕ್ಷತೆ ಸೂಚನೆ ಪಾಲಿಸಬೇಕು.
ರಾಹುಲ್ ಜೀವ ರಕ್ಷಕ ಸಿಬ್ಬಂದಿ
‘ಹೆಚ್ಚುವರಿ ನೇಮಕಕ್ಕೆ ಯೋಚನೆ’
ತಣ್ಣೀರುಬಾವಿ ಫಸ್ಟ್‌ ಬೀಚ್ ಬ್ಲ್ಯೂ ಫ್ಲಾಗ್ ಸಸಿಹಿತ್ಲುವಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಜೀವ ರಕ್ಷಕ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತದೆ. ತರಬೇತಿ ಪಡೆದ ಪ್ರಮಾಣೀಕೃತ ಜೀವ ರಕ್ಷಕ ಸಿಬ್ಬಂದಿಯನ್ನೇ ನೇಮಿಸಲಾಗಿದೆ. ಮಳೆಗಾಲದ ವೇಳೆ ವಿಪತ್ತು ನಿರ್ವಹಣೆಗೆ ತರಬೇತಿ ಪಡೆದ ಗೃಹ ರಕ್ಷಕ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅದೇ ಮಾದರಿಯಲ್ಲಿ ಜನದಟ್ಟಣೆ ಇರುವ ಸಂದರ್ಭಗಳಲ್ಲಿ ಬೇಸಿಗೆ ರಜೆಯ ಅವಧಿಯಲ್ಲಿ ನೇಮಕಕ್ಕೆ ಯೋಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿದರು. ತಣ್ಣೀರುಬಾವಿ ಫಸ್ಟ್ ಬೀಚ್ ಬ್ಲ್ಯೂ ಫ್ಲಾಗ್ ಬೀಚ್‌ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಟೆಂಡರ್ ಪಡೆದವರಿಂದ ಬೀಚ್ ನಿರ್ವಹಣೆಯಾಗುತ್ತದೆ. ಇತ್ತೀಚೆಗೆ ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಪ್ರವಾಸಿಗರು ಕಡಲತೀರಕ್ಕೆ ತೆರಳುವ ಮುನ್ನ ಸುರಕ್ಷಿತ ತಾಣಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜೆಟ್‌ ಸ್ಕೀ ಒದಗಿಸಲಿ’
‘ಸಮುದ್ರದ ಅಲೆಗಳು ಗಾಳಿಯ ಮೇಲೆ ನಿರ್ಧರಿತವಾಗುವುದರಿಂದ ಅವುಗಳ ಅಂತರಾಳವನ್ನು ಊಹಿಸಿ ಹೇಳಲು ಸಾಧ್ಯವಾಗದು. ಸಮುದ್ರದಲ್ಲಿ ಪ್ರತಿ 20 ಮೀಟರ್ ಅಂತರದಲ್ಲಿ ಅಲೆಗಳ ಸಂಚಲನ ವ್ಯತ್ಯಾಸ ಇರುತ್ತದೆ. ಕಡಲ ಮರ್ಮ ತಿಳಿದಿರುವ ಜೀವ ರಕ್ಷಕ ಸಿಬ್ಬಂದಿಯ ನಿರ್ದೇಶನಗಳನ್ನು ಪ್ರವಾಸಿಗರು ಪಾಲಿಸಬೇಕು. ಯಾರೂ ಇಲ್ಲದಾಗ ನೀರಿಗಿಳಿದು ಮುನ್ನುಗ್ಗುವುದು ಅಪಾಯಕಾರಿ’ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ ತಿಳಿಸಿದರು.  ಸಾಂಪ್ರದಾಯಿಕ ಈಜುಗಾರಿಕೆ ಬಲ್ಲವರನ್ನೇ ಜೀವ ರಕ್ಷಕ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು. ಸಣ್ಣ ಅಹಿತಕರ ಘಟನೆಯೂ ಪ್ರವಾಸೋದ್ಯಮದ ಮೇಲೆ ದು‌ಷ್ಪರಿಣಾಮ ಬೀರಬಲ್ಲದು ಎಂಬ ಅರಿವು ಸದಾ ಜಾಗೃತವಾಗಿರಬೇಕು. ಜೀವ ರಕ್ಷಕ ಸಿಬ್ಬಂದಿ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಹೊಂದಿದ್ದರೆ ಹೆಚ್ಚು ಅನುಕೂಲ. ಪ್ರವಾಸಿಗರು ಭೇಟಿ ನೀಡುವ ಎಲ್ಲ ಬೀಚ್‌ಗಳಲ್ಲಿ ಜೆಟ್ ಸ್ಕೀ ಒದಗಿಸಬೇಕು. ಇದು ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ ಸಹಕಾರಿ’ ಎಂದು ಅವರು ಈ ಹಿಂದೆ ಜೆಟ್ ಸ್ಕೀ ಮೂಲಕ ಹಲವರನ್ನು ರಕ್ಷಣೆ ಮಾಡಿದ ಘಟನೆ ವಿವರಿಸಿದರು.
‘ಮೀನುಗಾರರ ಮಾತು ಮೀರದಿರಿ’
ಉಳ್ಳಾಲ ಕಡಲ ತೀರದಲ್ಲಿ ಜೀವ ರಕ್ಷಕ ಈಜುಗಾರರ ಸಂಘ ಮೊಗವೀರ ಪಟ್ಣದ ಸದಸ್ಯರು ಜೀವ ರಕ್ಷಕ ಸಿಬ್ಬಂದಿಗೆ ನೆರವಾಗುತ್ತಾರೆ. ಉಳ್ಳಾಲ ಕಡಲ ತೀರದ ಕೆಲವು ಪ್ರದೇಶಗಳಲ್ಲಿ ಆಳಗುಂಡಿ ಇದೆ. ಪ್ರವಾಸಿಗರು ಎಚ್ಚರವಹಿಸಬೇಕು. ಆಳದ ಅರಿವಿಲ್ಲದೆ ನೀರಿನಲ್ಲಿ ನಡೆದು ಅಪಾಯಕ್ಕೆ ಸಿಲುಕಿದ ಅನೇಕರನ್ನು ಮೀನುಗಾರರು ರಕ್ಷಣೆ ಮಾಡಿದ ಘಟನೆಗಳು ನಡೆದಿವೆ. ನಾನು ಸ್ವತಃ ಅನೇಕರನ್ನು ರಕ್ಷಣೆ ಮಾಡಿದ್ದೇನೆ. ಪ್ರವಾಸಿಗರು ಸ್ಥಳೀಯರು ನೀಡುವ ನಿರ್ದೇಶನಗಳನ್ನು ಮೀರಬಾರದು ಎಂದು ಉಳ್ಳಾಲ ಗೃಹ ರಕ್ಷಕ ದಳದ ಗೃಹ ರಕ್ಷಕ ಪ್ರಸಾದ್ ಸುವರ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT