ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ತಂಗಡಿ | ಮಳೆಗಾಲದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ: ಮಣ್ಣು ಕುಸಿಯುವ ಭೀತಿ

Published 8 ಜುಲೈ 2024, 14:34 IST
Last Updated 8 ಜುಲೈ 2024, 14:34 IST
ಅಕ್ಷರ ಗಾತ್ರ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು , ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ ಕಾರಣದಿಂದ ಧರೆಯ ಮಣ್ಣು ಕುಸಿದು ಪಕ್ಕದ ಪೊಲೀಸ್‌ ಠಾಣೆಯ ಆವರಣ ಗೋಡೆ ಕುಸಿಯುವ ಭೀತಿ ಎದುರಾಗಿದೆ.

ಬೆಳ್ತಂಗಡಿ ತಾಲ್ಲೂಕು ಕಚೇರಿಯ ಶತಮಾನದಷ್ಟು ಹಳೆಯದಾದ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ಬಸ್ ನಿಲ್ದಾಣದ ನಿಲುಗಡೆ ಪ್ರದೇಶಕ್ಕಾಗಿ 10 ರಿಂದ 15 ಅಡಿ ಆಳದಲ್ಲಿ ಮಣ್ಣು ತೆಗೆಯಲಾಗಿದೆ. ಇದರ ಸುತ್ತಲೂ ತಾಲ್ಲೂಕು ಕಛೇರಿ , ಪೋಲಿಸ್ ಠಾಣೆ , ನಾರಾಯಣ ಗುರು ವಾಣಿಜ್ಯ ಸಂಕೀರ್ಣ , ಗಿರಣಿ ಅಂಗಡಿ ಇದ್ದು, ಈಗ  ಈ ಗುಂಡಿಯಲ್ಲಿ ಮಳೆ ನೀರು ನಿಂತು ಈಜುಕೊಳದಂತೆ ಬಾಸವಾಗುತ್ತಿದೆ.

ಮತ್ತೊಂದೆಡೆ ತಡೆಗೋಡೆ ನಿರ್ಮಾಣ ಕಾರ್ಯ ನಡೆದು ಮಣ್ಣು ತುಂಬಿಸಲಾಗಿದ್ದರೂ, ವಿಪರೀತ ಮಳೆಯಿಂದಾಗಿ ಪೊಲೀಸ್‌  ಠಾಣೆಯ ಭಾಗದಲ್ಲಿ ಮಣ್ಣು ಕುಸಿದಿದೆ. ಮಳೆ ಮುಂದುವರಿದರೆ ಇನ್ನಷ್ಟು ಮಣ್ಣು ಕುಸಿದು  ಠಾಣೆಯ ಆವರಣ ಗೋಡೆ ಕುಸಿಯುವ ಸಾಧ್ಯತೆಯಿದೆ.

ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿರುವುದರಿಂದ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT