ಬೆಳ್ತಂಗಡಿ: ಅಬಕಾರಿ ಉಪ ಅಧೀಕ್ಷಕ ಸಂತೋಷ ಮೋಡಗಿ ನೇತೃತ್ವದಲ್ಲಿ ಮದ್ದಡ್ಕ ಬಳಿಯ ಮನೆಯೊಂದರ ಮೇಲೆ ಜೂ. 3ರಂದು ರಾತ್ರಿ 8 ಗಂಟೆಗೆ ದಾಳಿ ಮಾಡಿದ ಅಬಕಾರಿ ದಳ 2 ಪ್ಲಾಸ್ಟಿಕ್ ಡಬ್ಬದಲ್ಲಿದ್ದ 250 ಗ್ರಾಂ ಗಾಂಜಾ ಹಾಗೂ 2 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದೆ.

ದಾಳಿ ವೇಳೆ ಆರೋಪಿ ಮಹಮ್ಮದ್ ರಫೀಕ್ ಪರಾರಿಯಾಗಿದ್ದು ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆ 1985ರ ಕಲಂ 8ಸಿ, 20(2)ಎ ಹಾಗೂ 25ರನ್ವಯ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ 4ರಂದು ವರದಿ ಸಲ್ಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪ ವಿಭಾಗದ ನಿರೀಕ್ಷಕ ನವೀನ್ ಕುಮಾರ್, ಉಪನಿರೀಕ್ಷಕ ಗಿರೀಧರ ಮಜಕರ್ ಹಾಗೂ ಬೆಳ್ತಂಗಡಿ ವಲಯ ಕಚೇರಿ ನಿರೀಕ್ಷಕ ಲಕ್ಷ್ಮಣ ಉಪ್ಪಾರ, ಉಪ ನಿರೀಕ್ಷಕ ಸೈಯದ್ ಶಬೀರ್ ಹಾಗೂ ಸಿಬ್ಬಂದಿ ಶ್ರೀನಿವಾಸ್, ಕೃಷ್ಣ ಅಗಸರ, ಭೋಜ, ವಿನೋಯ್, ವಾಹನ ಚಾಲಕ ಕೇಶವ್ ನಾಯ್ಕ, ನವೀನ್ ಭಾಗವಹಿಸಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.