ಬೆಳ್ತಂಗಡಿ: ಮಾರಾಟ ಮಾಡಲು ಕಾರಿನಲ್ಲಿ ಎಂಡಿಎಂಎ ಸಂಗ್ರಹಿಸಿಟ್ಟದ್ದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುವೆಟ್ಟು ಗ್ರಾಮದ ಮದ್ದಡ್ಕ ರಸ್ತೆಯಲ್ಲಿ ಶನಿವಾರ ಸಂಜೆ ಬೆಳ್ತಂಗಡಿ ಪಿಎಸ್ಐ ಆನಂದ್ ಎಂ. ನೇತೃತ್ವದ ತಂಡ ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದವಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರನ್ನು ಪರಿಶೀಲಿಸಿದಾಗ ಕಾರಿನ ಒಳಗೆ ಮಾದಕ ವಸ್ತು ಪತ್ತೆಯಾಗಿದೆ.

₹ 5.54 ಲಕ್ಷ ಮೌಲ್ಯದ 55.48 ಗ್ರಾಂ ಎಂಡಿಎಂಎ, ₹ 6 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ದೇರಳಕಟ್ಟೆಯ ಕೋಟೆಕಾರು ಉಮರ್ ಶರೀಫ್ (42) ಆರೋಪಿ. ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ಜ್ಯೂಸ್ ಹೌಸ್ ಅಂಗಡಿ ಹೊಂದಿದ್ದಾನೆ.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪೂರ್ ಮಠ ನೇತೃತ್ವದಲ್ಲಿ ಎಎಸ್ಐ ತಿಲಕ್ ರಾಜ್, ಪಂಪಾಪತಿ, ಶ್ರೀನಿವಾಸ, ಗಿರೀಶ್, ಪ್ರಕಾಶ್ ಪೂಜಾರಿ, ಜಗದೀಶ್, ಧರಿಶ್, ಯಮನಪ್ಪ, ದುಂಡಪ್ಪ, ಎಫ್ಎಸ್ಎಲ್ ತಂಡದ ಅರ್ಪಿತಾ, ಕಾವ್ಯಶ್ರೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.