ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು: ಬಿ.ಕೆ.ಹರಿಪ್ರಸಾದ್

Published 10 ಮಾರ್ಚ್ 2024, 13:33 IST
Last Updated 10 ಮಾರ್ಚ್ 2024, 13:33 IST
ಅಕ್ಷರ ಗಾತ್ರ

ಮೂಲ್ಕಿ: ‘ಜಾತಿ ಸಂಘಟನೆಯ ನಾಯಕರಾದವರೂ ಸ್ವಹಿತ ಬಿಟ್ಟು ಸಮಾಜದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿ. ರಾಜಕೀಯ ಶಕ್ತಿಯಾಗಲು ಸಮಾಜದಲ್ಲಿ ಸಂಘಟಿತರಾಗುವುದು ಮುಖ್ಯ. ನಾರಾಯಣಗುರುಗಳ ತತ್ವವೇ ಮೂಲ ಎಂದು ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಮೂಲ್ಕಿಯ ಶ್ರೀನಾರಾಯಣಗುರು ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಕ್ಷಾತೀತವಾಗಿ ಸಂಘಟನೆಯನ್ನು ಬೆಳೆಸಿದರೆ ಮಾತ್ರ ಉತ್ತಮ ಭವಿಷ್ಯ ರೂಪಿಸಬಹುದು. ಮಂಗಳೂರಿನಲ್ಲಿ ನಾರಾಯಣಗುರು ಪೀಠವು ಚಟುವಟಿಕೆಯಿಂದ ಇರುವಂತೆ ಕ್ರಮ ಕೈಗೊಳ್ಳುವೆ’ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ‘ಸಮಾಜದ ನಾಯಕರು, ಸ್ವಾಮೀಜಿಗಳು, ಹಿರಿಯರು ಮನಸ್ತಾಪವನ್ನು ಬಿಟ್ಟು ಒಂದುಗೂಡಿ ಆರ್ಥಿಕ ಶಕ್ತಿ ನೀಡಿ ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡಲು ಪ್ರಯತ್ನಿಸಬೇಕು. ರಾಜಕೀಯ ಶಕ್ತಿಯನ್ನು ಹೋರಾಟದ ಮೂಲಕ ನಡೆಸಿ ಮುನ್ನಡೆಯೋಣ’ ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್‌ಕುಮಾರ್‌, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು.

ವಿಖ್ಯಾತನಂದ ಸ್ವಾಮೀಜಿ, ಸತ್ಯಾನಂದತೀರ್ಥ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಲಾವಿದರ ನೆಲೆಯಲ್ಲಿ ಸುಮನ್ ತಲ್ವಾರ್, ಜಯಮಾಲ, ನವೀನ್ ಡಿ.ಪಡೀಲ್, ಸಾಧಕರಾಗಿ ದುಬೈ, ಬಹರೇನ್‌, ಒಮಾನ್‌, ಕುವೈಟ್, ಸೌದಿ ಅರೇಬಿಯ, ಕತಾರ್, ಮುಂಬೈ, ಪುಣೆ, ಬೆಂಗಳೂರು, ನಾಸಿಕ್, ವಡೋದರಾ, ಗೋವಾ ಬಿಲ್ಲವ ಸಂಘಟನೆ, ಯುವವಾಹಿನಿ, ರಾಜ್‌ಕುಮಾರ್‌ ಬಹರೇನ್‌, ರಾಮಣ್ಣ ಪೂಜಾರಿ ಅವರನ್ನು ಹಾಗೂ ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು.

ಸೂರ್ಯಕಾಂತ್ ಸುವರ್ಣ, ಬಾಳ ಗಂಗಾಧರ ಪೂಜಾರಿ, ಪ್ರಭಾಕರ ಬಂಗೇರ, ಕಟಪಾಡಿ ಬಿ.ಎಲ್.ಶಂಕರ್, ಗೆಜ್ಜೆಗಿರಿ ಪಿತಾಂಬರ ಹೆರಾಜೆ, ಚಿತ್ತರಂಜನ್ ಕಂಕನಾಡಿ, ನವೀನ್‌ಚಂದ್ರ ಸುವರ್ಣ, ಎನ್.ಟಿ.ಪೂಜಾರಿ, ಸತೀಶ್ ಪೂಜಾರಿ, ಎಸ್.ಕೆ.ಪೂಜಾರಿ, ಗಣೇಶ್ ಪೂಜಾರಿ, ಸತ್ಯಜಿತ್ ಸುರತ್ಕಲ್, ನವೀನ್ ಅಮೀನ್, ಪ್ರಶಾಂತ್ ಪೂಜಾರಿ, ಮಹಾಮಂಡಲದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಮೊದಲು ಅತಿಥಿಗಳ ಹಾಗೂ ಸ್ವಾಮೀಜಿಗಳ ಮೆರವಣಿಗೆ ನಡೆಯಿತು, ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದರು. ಸರಕಾರಕ್ಕೆ ವಿವಿಧ ಬೇಡಿಕೆಯ ಠರಾವನ್ನು ಮಂಡಿಸಲಾಯಿತು.

‘ತೆಂಗಿನಕಾಯಿ ಪ್ರಸಾದಕ್ಕೆ ದೇವಸ್ಥಾನದ ಹೊರಗೆ ಕಾಯುತ್ತಿದ್ದ ನಾನು ಸಚಿವನಾದೆ‘

ಒಂದು ಕಾಲದಲ್ಲಿ ಶೂದ್ರನಾಗಿ ದೇವಸ್ಥಾನದ ಹೊರಗೆ ತೆಂಗಿನಕಾಯಿಯ ಪ್ರಸಾದಕ್ಕೆ ಕಾದು ಕುಳಿತವ ಕಾಲ ಬದಲಾದಂತೆ ರಾಜ್ಯ ಮುಜರಾಯಿ ಸಚಿವನಾಗಿ ಅದೇ ದೇವಸ್ಥಾನಗಳಲ್ಲಿ ಸನ್ಮಾನ ಸಿಕ್ಕಿದೆ. ಸಮಾಜ ಬದಲಾಗಿದೆ. ಶೈಕ್ಷಣಿಕ ನೆಲೆಯಲ್ಲಿ ನಾವು ಬೆಳೆಯಬೇಕಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಜಾತಿಯವನೆಂದು ಅಭಿಮಾನ ಬೆಳೆಯಲಿ’

ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬೆಳೆಯುವವರನ್ನು ಜಾತಿ ಸಂಘಟನೆಗಳು ಪಕ್ಷಾತೀತವಾಗಿ ಆರ್ಥಿಕ, ನೈತಿಕ ಬಲದಲ್ಲಿ ಪ್ರೋತ್ಸಾಹಿಸಬೇಕು. ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಮಾನಾಥ ಕೋಟ್ಯಾನ್ ಹೇಳಿದರು.

ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ
ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ

Graphic text / Statistics - 2. ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದರು. ಸ್ವಹಿತ ಬಿಟ್ಟು ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳಿರಿ : ಬಿ.ಕೆ.ಹರಿಪ್ರಸಾದ್ ಪ್ರಜಾವಾಣಿ ವಾತರ್ೆ ಮೂಲ್ಕಿ: ಜಾತಿ ಸಂಘಟನೆಯ ನಾಯಕರಾದವರೂ ತಮ್ಮ ಸ್ವಹಿತ ಬಿಟ್ಟು ಸಮಾಜದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳಿರಿ ರಾಜಕೀಯ ಶಕ್ತಿಯಾಗಲು ಸಮಾಜದಲ್ಲಿ ಸಂಘಟಿತರಾಗುವುದು ಬಹಳ ಮುಖ್ಯ ಸಂವಿಧಾನದಿಂದ ಪ್ರಜಾಪ್ರಭುತ್ವತೆಯ ರಾಷ್ಟ್ರವಾಗಿದೆ. ನಾರಾಯಣಗುರುಗಳ ತತ್ವವೇ ಮೂಲ ಎಂದು ಬಿಲ್ಲವ ಸಮಾಜ ಒಂದುಗೂಡಿ ಕೆಲಸ ಮಾಡಬೇಕು ಪಕ್ಷಾತೀತವಾಗಿ ಸಂಘಟನೆಯನ್ನು ಬೆಳೆಸಿದಲ್ಲಿ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಬಹುದು ಮಂಗಳೂರಿನಲ್ಲಿ ಶ್ರೀ ನಾರಾಯಣಗುರು ಪೀಠವು ಕಾರ್ಯ ಚಟುವಟಿಕೆಯಲ್ಲಿರಬೇಕಾದ ಕ್ರಮವನ್ನು ಕೈಗೊಳ್ಳುವೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಅವರು ಮೂಲ್ಕಿಯ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಸಮಾಜದ ನಾಯಕರು ಸ್ವಾಮೀಜಿಗಳು ಹಿರಿಯರು ಪರಸ್ಪರ ಮನಸ್ತಾಪವನ್ನು ಬಿಟ್ಟು ಒಂದು ಗೂಡಿ ಆಥರ್ಿಕ ಶಕ್ತಿಯನ್ನು ನೀಡುವ ಹಾಗೂ ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡಲು ಪ್ರಯತ್ನಿಸಿ ರಾಜಕೀಯ ಶಕ್ತಿಯನ್ನು ಹೋರಾಟದ ಮೂಲಕ ನಡೆಸಿ ಮುನ್ನಡೆಯೋಣ ಎಂದರು. ಶಾಸಕರಾದ ಉಮಾನಾಥ ಕೋಟ್ಯಾನ್ ಕೋಟ ಶ್ರೀನಿವಾಸ ಪೂಜಾರಿ ವಿ.ಸುನಿಲ್ಕುಮಾರ್ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ವಿಖ್ಯಾತನಂದ ಸ್ವಾಮೀಜಿ ಸತ್ಯಾನಂದತೀರ್ಥ ಸ್ವಾಮೀಜಿ ಅರುಣಾನಂದ ಸ್ವಾಮೀಜಿ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲಾವಿದರ ನೆಲೆಯಲ್ಲಿ ಸುಮನ್ ತಲ್ವಾರ್ ಜಯಮಾಲ ನವೀನ್ ಡಿ. ಪಡೀಲ್ ಸಾಧಕರಾಗಿ ದುಬೈ ಬೆಹರಿನ್ ಓಮನ್ ಕುವೈಟ್ ಸೌದಿ ಅರೇಬಿಯ ಕತಾರ್ ಮುಂಬೈ ಪೂನಾ ಬೆಂಗಳೂರು ನಾಸಿಕ್ ಬರೋಡ ಗೋವಾ ಬಿಲ್ಲವ ಸಂಘಟನೆ ಯುವವಾಹಿನಿ ರಾಜ್ಕುಮಾರ್ ಬೆಹರೈನ್ ರಾಮಣ್ಣ ಪೂಜಾರಿ ಅವರನ್ನು ಹಾಗೂ ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು. ಸೂರ್ಯಕಾಂತ್ ಸುವರ್ಣ ಬಾಳ ಗಂಗಾಧರ ಪೂಜಾರಿ ಪ್ರಭಾಕರ ಬಂಗೇರ ಕಟಪಾಡಿ ಬಿ.ಎಲ್.ಶಂಕರ್ ಗೆಜ್ಜೆಗಿರಿ ಪಿತಾಂಬರ ಹೆರಾಜೆ ಚಿತ್ತರಂಜನ್ ಕಂಕನಾಡಿ ನವೀನ್ಚಂದ್ರ ಸುವರ್ಣ ಎನ್.ಟಿ.ಪೂಜಾರಿ ಸತೀಶ್ ಪೂಜಾರಿ ಎಸ್.ಕೆ.ಪೂಜಾರಿ ಗಣೇಶ್ ಪೂಜಾರಿ ಸತ್ಯಜಿತ್ ಸುರತ್ಕಲ್ ನವೀನ್ ಅಮೀನ್ ಪ್ರಶಾಂತ್ ಪೂಜಾರಿ ಮಹಾಮಂಡಲದ ಪದಾಧಿಕಾರಿಗಳು ಮತ್ತಿತರರು ಇದ್ದರು. ಕಾರ್ಯಕ್ರಮದ ಮೊದಲು ಅತಿಥಿಗಳ ಹಾಗೂ ಸ್ವಾಮೀಜಿಗಳ ಭವ್ಯ ಮೆರವಣಿಗೆ ನಡೆಯಿತು ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದರು. ಸರಕಾರಕ್ಕೆ ವಿವಿಧ ಬೇಡಿಕೆಯ ಠರಾವನ್ನು ಮಂಡಿಸಲಾಯಿತು. ಬಾಕ್ಸ್ನಲ್ಲಿ... ತೆಂಗಿನಕಾಯಿ ಪ್ರಸಾದಕ್ಕೆ ಕಾದಿದ್ದೆ.. ಒಂದು ಕಾಲದಲ್ಲಿ ಶೂದ್ರನಾಗಿ ದೇವಸ್ಥಾನದ ಹೊರಗೆ ತೆಂಗಿನಕಾಯಿಯ ಪ್ರಸಾದಕ್ಕೆ ಕಾದು ಕುಳಿತವ ಕಾಲ ಬದಲಾದಂತೆ ರಾಜ್ಯ ಮುಜುರಾಯಿ ಸಚಿವನಾಗಿ ಅದೇ ದೇವಸ್ಥಾನಗಳಲ್ಲಿ ಸಮ್ಮಾನ ಗೌರವ ಸಿಕ್ಕಿದೆ. ಸಮಾಜ ಬದಲಾಗಿದೆ. ಶೈಕ್ಷಣಿಕ ನೆಲೆಯಲ್ಲಿ ನಾವು ಬೆಳೆಯಬೇಕಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಜಾತಿಯವನೆಂದು ಅಭಿಮಾನ ಬೆಳೆಯಲಿ ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬೆಳೆಯುವವರನ್ನು ಜಾತಿ ಸಂಘಟನೆಗಳು ಪಕ್ಷಾತೀತವಾಗಿ ಆಥರ್ಿಕ ನೈತಿಕ ಬಲದಲ್ಲಿ ಪ್ರೋತ್ಸಾಹಿಸಬೇಕು ಮುಖಂಡರು ಜಾತಿ ಅಭಿಮಾನವನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಮಾನಾಥ ಕೋಟ್ಯಾನ್ ಹೇಳಿದರು. -0-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT