ಮಂಗಳೂರು: ಪ್ರಜಾಪ್ರಭುತ್ವ ಎಂದರೆ 5 ವರ್ಷಗಳಿಗೊಮ್ಮೆ ಮತಗಟ್ಟೆಗೆ ಹೋಗಿ ಬಂದು ಒಂದಷ್ಟು ಸಮಯವನ್ನು ತ್ಯಾಗ ಮಾಡಿದೆ ಎಂದುಕೊಂಡು ಬೀಗುವುದಲ್ಲ, ಅದು ಪ್ರತಿ ಗಳಿಗೆಯ, ನಿತ್ಯನಿರಂತರ ಪ್ರಕ್ರಿಯೆ ಆಗಬೇಕು ಎಂದು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಅಭಿಪ್ರಾಯಪಟ್ಟರು.

ಮಂಗಳೂರು ಲಿಟ್ ಫೆಸ್ಟ್ ಅಂಗವಾಗಿ ನಡೆದ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವವಾದಿ ಆಡಳಿತ ಕುರಿತ ಸಂವಾದದಲ್ಲಿ ಮಾತನಾಡಿದ ಅವರು ಯುವ ಸಮುದಾಯ ಭಾರತದ ಪ್ರಜಾಪ್ರಭುತ್ವದ ಬಗ್ಗೆ ತಿಳಿದಿರಬೇಕು, ಪ್ರಜಾಪ್ರಭುತ್ವದ ಪ್ರಕ್ರಿಯೆಯ ಬಗ್ಗೆ ಪ್ರತಿದಿನವೂ ಯೋಚಿಸುತ್ತಿರಬೇಕು ಮತ್ತು ಕ್ರಿಯಾತ್ಮಕವಾಗಿ ಭಾಗಿಯಾಗಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧರಾಗಿರಬೇಕು ಎಂದರು.

ಯುವಜನರು ರಾಜಕೀಯದಲ್ಲಿ ಭಾಗಿಯಾಗುವುದು ಮತ್ತು ಆಗದೇ ಇರುವುದು ಅವರವರಿಗೆ ಬಿಟ್ಟ ವಿಷಯ. ಆದರೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತರಾಗಿರಬೇಕು. ಸಿದ್ಧಾಂತ ಆಧಾರಿತ ರಾಜಕೀಯ ಮಾಡಲು ಬಯಸುವುದಾದರೆ ಗಟ್ಟಿತನ ಹೊಂದಿರಬೇಕು. ಆಕ್ಷೇಪಗಳು ಕೇಳಿಬಂದರೆ ಶಾಂತಚಿತ್ತದಿಂದ ಇರಲು ಕಲಿಯಬೇಕು ಎಂದು ಅವರು ಹೇಳಿದರು.

ಭಾರತದ ಪ್ರಜಾಪ್ರಭುತ್ವದ ಬೇರುಗಳು ಆಳದಲ್ಲಿವೆ. ಸಾವಿರಾರು ಗ್ರಾಮ ಪಂಚಾಯಿತಿಗಳು, ಮುನ್ಸಿಪಾಲಿಟಿಗಳು, ನೂರಾರು ಸಂಸದರು ಇರುವ ದೇಶವಿದು. ಜಗತ್ತಿನ ಪ್ರಮುಖ ರಾಷ್ಟ್ರಗಳ ಸಂಸದರಿಗೆ ಸಿಗುವ ಗರಿಷ್ಠ ಮತಗಳನ್ನು ಲೆಕ್ಕ ಹಾಕಿದರೆ ನಮ್ಮ ದೇಶದ ಸಂಸದರಿಗೆ ಸಿಗುವುದಕ್ಕಿಂತ 10 ಪಟ್ಟು ಕಡಿಮೆ. ಹೀಗಾಗಿ ಭಾರತದ ಪ್ರಜಾಪ್ರಭುತ್ವ ವಿಶಿಷ್ಟ. ಜಿಡಿಪಿಯತ್ತ ಗಮನ ಹರಿಸಿದರೆ ಚೀನಾ ಕಳೆದ 40 ವರ್ಷಗಳಲ್ಲಿ ಭಾರತಕ್ಕಿಂತ ನಾಲ್ಕು ಪಟ್ಟು ಬೆಳೆದಿದೆ. ಆದರೆ ಪ್ರಜಾಪ್ರಭುತ್ವಕ್ಕೂ ಇಂಥ ಬೆಳವಣಿಗೆಗೂ ವ್ಯತ್ಯಾಸವಿದೆ. ನಮ್ಮಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಜಾಪ್ರಭುತ್ವ ತತ್ವದಡಿ, ಎಲ್ಲ ವೈವಿಧ್ಯತೆಯನ್ನೂ ಸರಿದೂಗಿಸಿಕೊಂಡು ನಡೆಯುವುದರಿಂದ ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು.

ನಗರಕೇಂದ್ರಿತ ಅಭಿವೃದ್ಧಿ ಕೆಲವು ವರ್ಷಗಳ ವರೆಗೆ ಭಾರತದ ಸರ್ವಾಂಗೀಣ ಬೆಳವಣಿಗೆಗೆ ಅಡ್ಡಿಯಾಗಿತ್ತು. ಹೆಚ್ಚು ಸಂಸದರು ಇರುವಲ್ಲಿಗೆ ಅಧಿಕ ಅನುದಾನ ಒದಗಿಸುತ್ತಿದ್ದುದರಿಂದ ಕೆಲವು ಪ್ರದೇಶಗಳ ಜನರು ಬಂಡೇಳುತ್ತಿದ್ದರು. ಇಂಥ ಕಾರಣಗಳಿಂದಾಗಿಯೇ ತಮಿಳುನಾಡು, ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳು ಪ್ರತ್ಯೇಕತೆ ಬಯಸಿದ್ದವು. ಈ ಪರಿಸ್ಥಿತಿ ಈಗ ಇಲ್ಲದಾಗಿದೆ. ನರೇಂದ್ರ ಮೋದಿಯವರು ಇಡೀ ಭಾರತವನ್ನು ಒಂದಾಗಿ ನೋಡುತ್ತಿದ್ದು ಎಲ್ಲ ರಾಜ್ಯಗಳಿಗೂ ಅನುದಾನವನ್ನು ಸಮನಾಗಿ ಹಂಚುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ಕೊಡುತ್ತಿದ್ದುದಕ್ಕಿಂತ ಮೂರು ಪಟ್ಟು ಹಣ ರಾಜ್ಯಗಳಿಗೆ ಈಗ ಸಿಗುತ್ತಿದೆ ಎಂದು ಅವರು ಹೇಳಿದರು.

ಪತ್ರಕರ್ತ ಜೈದೀಪ್ ಶೆಣೈ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.