ಬುಧವಾರ, ಜುಲೈ 28, 2021
21 °C

ಮಂಗಳೂರು: ಮಾಸಾಶನವಿಲ್ಲದೇ ಕಂಗಾಲಾದ ಅಂಧ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ನಗರದ ಹೊರ ವಲಯದಲ್ಲಿರುವ ಮಳಲಿ ಗ್ರಾಮದ ಪರಿಶಿಷ್ಟ ಜಾತಿಯ ಸೋಮಯ್ಯ ಎಂಬ ಅಂಧ ವ್ಯಕ್ತಿಗೆ ಎಂಟು ತಿಂಗಳಿನಿಂದ ಅಂಗವಿಕಲರ ಮಾಸಾಶನ ಪಾವತಿಯೇ ಆಗಿಲ್ಲ. ಈ ಸಂಬಂಧ ಸರ್ಕಾರಿ ಕಚೇರಿಗಳಿಗೆ ಅಲೆದು, ಅಲೆದು ಸುಸ್ತಾಗಿದ್ದಾರೆ ಅವರು.

ಮಾಸಾಶನ ಸಿಗದೇ ಕಂಗಾಲಾಗಿರುವ ಅವರು ಮಂಗಳವಾರ ತಮ್ಮ ಅಳಲು ತೋಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಬಂದಿದ್ದರು. ಪತ್ರಿಕಾಗೋಷ್ಠಿಯ ನಡುವೆಯೇ ಸೋಮಯ್ಯ ಅವರನ್ನು ಪರಿಚಯಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಸಮಸ್ಯೆ ಕುರಿತು ವಿವರಿಸಿದರು.

‘ನನಗೆ ಎರಡೂ ಕಣ್ಣು ಕಾಣಿಸುವುದಿಲ್ಲ. ಒಬ್ಬನೇ ಇದ್ದೇನೆ. ಸರ್ಕಾರ ನೀಡುವ ಮಾಸಾಶನವೇ ಜೀವನಕ್ಕೆ ಆಧಾರ. ಎಂಟು ತಿಂಗಳಿಂದ ಹಣವೇ ಬಂದಿಲ್ಲ. ತಾಲ್ಲೂಕು ಕಚೇರಿ ಸೇರಿದಂತೆ ಹಲವು ಕಡೆ ಹೋಗಿ ವಿಚಾರಿಸಿದೆ. ಯಾರೂ ಸರಿಯಾದ ಉತ್ತರ ನೀಡಲಿಲ್ಲ’ ಎಂದು ಸೋಮಯ್ಯ ಹೇಳಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಬಸ್‌ ಸೌಲಭ್ಯ ಇರಲಿಲ್ಲ. ಬಾಡಿಗೆ ಆಟೊದಲ್ಲಿ ಸರ್ಕಾರಿ ಕಚೇರಿಗಳಿಗೆ ಹೋಗಿಬಂದೆ. ನನ್ನ ಬಳಿ ಇದ್ದ ಹಣವೆಲ್ಲಾ ಖಾಲಿಯಾಗಿದೆ’ ಎಂದರು.

ಒಬ್ಬರ ಕತೆಯಲ್ಲ

‘ಇದು ಸೋಮಯ್ಯ ಅವರೊಬ್ಬರ ಕತೆಯಲ್ಲ. ಅಂಗವಿಕಲರು, ವೃದ್ಧರು, ವಿಧವೆಯರಿಗೆ ನೀಡುತ್ತಿದ್ದ ಮಾಸಾಶನವೂ ಹಲವು ತಿಂಗಳುಗಳಿಂದ ಪಾವತಿ ಆಗಿಲ್ಲ. ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ರಮಾನಾಥ ರೈ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು