ಗುರುವಾರ , ಸೆಪ್ಟೆಂಬರ್ 23, 2021
21 °C

ಮೂಲ್ಕಿ: ಪೈಪ್ ಬಿದ್ದು ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೃತಪಟ್ಟಿರುವ ಬಾಲಕ ಯುವರಾಜ್

ಮೂಲ್ಕಿ: ಇಲ್ಲಿನ ಲಿಂಗಪ್ಪಯ್ಯಕಾಡಿನ ಆಶ್ರಯ ಕಾಲೊನಿಯ ಬಳಿಯಲ್ಲಿ ದಾಸ್ತಾನು ಇಟ್ಟಿದ್ದ ಸಿಮೆಂಟ್ ಪೈಪ್ ಬುಧವಾರ ಉರುಳಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿದೆ.

ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಎಂಬುವರ ಮಗ ಯುವರಾಜ (4) ಮೃತಪಟ್ಟ ಬಾಲಕ. ನಾಗರಾಜ್ ಎಂಬುವರ ಕಂಪನಿಯ ಸಿಮೆಂಟ್ ಪೈಪ್‌ಗಳನ್ನು ದಾಸ್ತಾನು ಇಡಲಾಗಿತ್ತು. ಅಲ್ಲಿಯೇ ಆಟವಾಡುತ್ತಿದ್ದ ಮಗುವಿನ ಮೇಲೆ ಪೈಪ್ ಬಿದ್ದಿದ್ದು, ತಕ್ಷಣ ಮಗುವನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು