ಮಂಗಳೂರು: ಎಲಿಮಿನೇಷನ್ ಸುತ್ತಿನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಟಿ.ವಿ.ರಮಣಿ ಮತ್ತು ಬಿಂದಿಯಾ ಕೊಹ್ಲಿ ಇಲ್ಲಿ ನಡೆಯುತ್ತಿರುವ ಬೇಸಿಗೆ ಕಾಲದ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನ ಮಿಶ್ರ ವಿಭಾಗದ ಡಾ.ಕೆ.ಕೆ.ಭಟ್ನಾಗರ್ ಸ್ಮಾರಕ ಪ್ರಶಸ್ತಿಗೆ ಮುತ್ತಿಟ್ಟರು. ಬಿಂದಿಯಾ, ಮಹಿಳೆಯರ ಪೇರ್‌ನಲ್ಲಿ ಪ್ರಿಯಾ ಬಾಲಸುಬ್ರಹ್ಮಣ್ಯನ್ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು.

ಭಾರತ ಬ್ರಿಜ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬ್ರಿಜ್ ಸಂಸ್ಥೆಯ ಆಶ್ರಯದಲ್ಲಿ ಕರಾವಳಿ ಬ್ರಿಜ್ ಸಂಸ್ಥೆ, ಮೋತಿ ಮಹಲ್ ಹೋಟೆಲ್‌ನಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಫೈನಲ್ ಲೀಗ್‌ನಲ್ಲಿ ಟಿ.ವಿ.ಆರ್ ಮತ್ತು ಬಿಂದಿಯಾ 87.10 ಸ್ಕೋರು ಗಳಿಸಿದರು. 25 ಸುತ್ತುಗಳ ಸ್ಪರ್ಧೆಯಲ್ಲಿ 83.78 ಸ್ಕೋರು ಕಲೆ ಹಾಕಿದ ರಾಜೀವ್ ಖಂಡೆಲ್ವಾನಿ ಮತ್ತು ಹಿಮಾನಿ ಖಂಡೆಲ್ವಾನಿ ರನ್ನರ್ ಅಪ್ ಆದರು.

ಶುಕ್ರವಾರ ನಡೆದ ಎಲಿಮಿನೇಷನ್ ಸುತ್ತಿನ ಕೊನೆಯಲ್ಲಿ ಮುಂಬೈನ ದಂಪತಿ ಸಂದೀಪ್ ಕರ್ಮಾರ್ಕರ್ ಮತ್ತು ಮರೀನಿ ಕರ್ಮಾರ್ಕರ್ 151.84 ಸ್ಕೋರು ಗಳಿಸಿ ಅಗ್ರಸ್ಥಾನದಲ್ಲಿದ್ದರು. ಟಿ.ವಿ.ಆರ್ ಮತ್ತು ಬಿಂದಿಯಾ, ಫೈನಲ್ ಲೀಗ್ ಹಂತ ಪ್ರವೇಶಿಸಿದ 26 ಜೋಡಿಯ ಪೈಕಿ 16ನೇ ಸ್ಥಾನದಲ್ಲಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಸಂದೀಪ್ ಮತ್ತು ಮರೀನಿ 8ನೇ ಸ್ಥಾನಕ್ಕೆ ಕುಸಿದರು.

ಶನಿವಾರ ಬೆಳಿಗ್ಗೆಯಿಂದಲೇ ಉತ್ತಮ ಆಟವಾಡುತ್ತ ಸಾಗಿದ ಟಿ.ವಿ.ಆರ್ ಮತ್ತು ಬಿಂದಿಯಾ ಫೈನಲ್ ಲೀಗ್‌ನ 5ನೇ ಸುತ್ತಿನಲ್ಲಿ ಸಂದೀಪ್ ಕರ್ಮಾರ್ಕರ್ ಮತ್ತು ಮರೀನಿ ಕರ್ಮಾರ್ಕರ್ ಎದುರು ಚಾಣಾಕ್ಷ ನಡೆಗಳ ಮೂಲಕ ಸ್ಕೋರು ಕಳೆದುಕೊಳ್ಳದಂತೆ ನೋಡಿಕೊಂಡರು. ಉಳಿದ ಸುತ್ತುಗಳಲ್ಲಿ ಏಳು–ಬೀಳು ಕಂಡರೂ ಚೇತರಿಸಿಕೊಂಡು ಪ್ರಶಸ್ತಿಯತ್ತ ಹೆಜ್ಜೆ ಹಾಕಿದರು.

ಫೈನಲ್ ಲೀಗ್‌ನಲ್ಲಿ ಮೊದಲ 10 ಸ್ಥಾನ ಗಳಿಸಿದವರು: ಟಿ.ವಿ.ರಮಣಿ, ಬಿಂದಿಯಾ ಕೊಹ್ಲಿ–1 (ಸ್ಕೋರು: 87.10), ರಾಜೀವ್ ಖಂಡೇಲ್ವಾಲ್, ಹಿಮಾನಿ ಖಂಡೇಲ್ವಾಲ್–2 (83.78), ಉತ್ತಮ್ ಸ್ವರೂಪ್ ಗುಪ್ತಾ, ಸಾರಿಕಾ ಮಿತ್ತಲ್–3 (49.63), ರಂಗ ಖದ್ಲೋಯ, ಮಿನಿ ಅಗರವಾಲ್–4 (48), ಅಭಿಜಿತ್ ಚಕ್ರವರ್ತಿ, ಆಶಾ ಶರ್ಮಾ–5 (46.78), ಪ್ರಿಯರಂಜನ್ ಸಿನ್ಹಾ, ಬಿಂದಿಯಾ ನಾಯ್ಡು–6 (35.90), ರಂಜನ್ ಭಟ್ಟಾಚಾರ್ಯ, ರಿಚಾ ಶ್ರೀರಾಮ್–7 (25.05), ಸಂದೀಪ್ ಕರ್ಮಾರ್ಕರ್, ಮರೀನಿ ಕರ್ಮಾರ್ಕರ್–8 (25), ಅಂಜಲಿ ಕಾರ್ತಿಕೇಯನ್, ಸಂಭುನಾಥ್ ಘೋಷ್–9 (19.11), ರವಿ ಕೌಲ್, ದೀಪಿಕಾ ಮೆಹ್ತಾ–10 (16.08).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.