ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ ರತ್ನ ಪ್ರಶಸ್ತಿ ಪ್ರದಾನ ನಾಳೆ

Published 17 ಮೇ 2024, 14:40 IST
Last Updated 17 ಮೇ 2024, 20:26 IST
ಅಕ್ಷರ ಗಾತ್ರ

ಮಂಗಳೂರು: ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ -2024 ಕಾರ್ಯಕ್ರಮವು ಮೇ 19ರಂದು ಮಧ್ಯಾಹ್ನ 3ಗಂಟೆಗೆ ಪುರಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ರಂಜಿತ್ ಶೆಟ್ಟಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿವೃತ್ತ ಸೈನಿಕ ಕರ್ನಲ್ ಅಗರಿ ಜಗಜೀವನ್ ಭಂಡಾರಿ, ಡಾ.ಎಂ.ಮೋಹನ್ ಆಳ್ವ, ಕರುಣಾಕರ ಎಂ ಶೆಟ್ಟಿ, ಕಿಶೋರ್ ಹೆಗ್ಡೆ ಮೊಳಹಳ್ಳಿ, ಆರ್.ಕೆ. ಶೆಟ್ಟಿ, ಸೀತಾರಾಮ್ ರೈ, ಪ್ರವೀಣ್ ಶೆಟ್ಟಿ ಪುತ್ತೂರು, ಎಸ್‌.ಬಿ.ಶೆಟ್ಟಿ, ಮಿತ್ರಂಪಾಡಿ ಜಯರಾಮ ರೈ ಅವರಿಗೆ ಬಂಟ ರತ್ನ -2024ರ ಪ್ರಶಸ್ತಿ ನೀಡಲಾಗುವುದು ಎಂದರು.

ರಾಜೇಂದ್ರ ವಿ. ಶೆಟ್ಟಿ, ಮುರಳಿ ಮೋಹನ್ ಶೆಟ್ಟಿ ಗೋವಾ, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ. ಉಮೇಶ್ ಶೆಟ್ಟಿ, ವಿಶು ಶೆಟ್ಟಿ ಅಂಬಲಪಾಡಿ, ಪ್ರಭಾಕರ್ ವಿ.ಶೆಟ್ಟಿ ಅವರಿಗೆ ಬಂಟ ವಿಭೂಷಣ, ಆದರ್ಶ್ ಶೆಟ್ಟಿ ಹಾಲಾಡಿ, ಮಂದಾರ ಶೆಟ್ಟಿ ಹೊನ್ನಾಳ, ಎಚ್. ಪ್ರಸನ್ನಚಂದ್ರ ಶೆಟ್ಟಿ, ಹರ್ಷ ಕುಮಾರ್ ರೈ ಮಾಡಾವು ಅವರಿಗೆ ಯುವ ಬಂಟ ರತ್ನ ಪ್ರಶಸ್ತಿ ನೀಡಲಾಗುವುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ರಕ್ಷಣ್ ಶೆಟ್ಟಿ ಮಾಡೂರು ಬಳಗದಿಂದ ಸಂಗೀತ ರಸಸಂಜೆ, ಧೀರಜ್ ರೈ ಸಂಪಾಜೆ ಭಾಗವತಿಕೆಯಲ್ಲಿ ಕಡಬ ದಿನೇಶ್ ರೈ ಸಾರಥ್ಯದ ಯಕ್ಷಗಾನ– ನಾಟ್ಯ - ಹಾಸ್ಯ ವೈಭವ, ಶಾರದಾ ಆರ್ಟ್ಸ್ ತಂಡದ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಪ್ರಮುಖರಾದ ವಿಶ್ವನಾಥ ಶೆಟ್ಟಿ, ಸುಕೇಶ್ ಭಂಡಾರಿ, ರಾಜೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT