ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳಶಾಹಿಗಳಿಂದ ಬಡವರ ಬದುಕು ನಾಶ: ಜೀವನ್‌ ರಾಜ್‌

ಸಿಪಿಎಂನ ಕುತ್ತಾರು ಯುವಜನ ಶಾಖೆಯ ಸಮ್ಮೇಳನದ
Published : 9 ಸೆಪ್ಟೆಂಬರ್ 2024, 5:17 IST
Last Updated : 9 ಸೆಪ್ಟೆಂಬರ್ 2024, 5:17 IST
ಫಾಲೋ ಮಾಡಿ
Comments

ಉಳ್ಳಾಲ: ‘ಬಂಡವಾಳಶಾಹಿ ಸಿದ್ದಾಂತದ ಲಾಭಕೋರತನ ಬಹುಸಂಖ್ಯಾತ ಬಡಜನರನ್ನು ಹಸಿವಿನ ಕೂಪಕ್ಕೆ ತಳ್ಳುತ್ತಿದ್ದು ಜನತೆಯ ಬದುಕನ್ನೇ ಸರ್ವನಾಶಮಾಡುತ್ತಿದೆ’ ಎಂದು ಸಿಪಿಎಂ ಮುಖಂಡ ಜೀವನ್ ರಾಜ್ ಕುತ್ತಾರ್ ಹೇಳಿದರು.

ಸಿಪಿಎಂನ ಕುತ್ತಾರು ಯುವಜನ ಶಾಖೆಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ವಿಸ್ತಾರಗೊಳ್ಳುತ್ತಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮತಾವಾದದತ್ತ ಆಕರ್ಷಿತರಾಗಿದ್ದಾರೆ. ಜಗತ್ತಿನ ಹಲವು ದೇಶಗಳಲ್ಲಿ ಇತ್ತೀಚಿಗೆ ಎಡಪಂಥೀಯ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿರುವುದೇ ಇದಕ್ಕೆ ಸಾಕ್ಷಿ’ ಎಂದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ‘ಜಿಲ್ಲೆಯಲ್ಲಿ ಬಡವರ ಜಮೀನು ಹಕ್ಕು,  ಕಾರ್ಮಿಕರ ಹಕ್ಕು ಹಾಗೂ ಜನಸಾಮಾನ್ಯರ ಬದುಕಿನ ಸವಾಲುಗಳನ್ನು ಎದುರಿಸಲು ನಡೆದ ಹೋರಾಟಗಳಿಗೆ  ಗಟ್ಟಿ ಧ್ವನಿಯಾಗಿರುವುದು ಕಮ್ಯುನಿಸ್ಟ್ ಪಕ್ಷ.  ಶಾಂತಿ ಸೌಹಾರ್ದ ಕಾಪಾಡುವಲ್ಲೂ ಸಿಪಿಎಂ ಸದಾ ಮುಂದು’ ಎಂದರು. 

ಹಿರಿಯ ಮುಖಂಡರಾದ  ರಾಮಚಂದ್ರ ತೇವುಲ ಧ್ವಜಾರೋಹಣ ನೆರವೇರಿಸಿ ಸಮ್ಮೇಳನವನ್ನು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣಪ್ಪ ಸಾಲ್ಯಾನ್, ಮುನ್ನೂರು ಗ್ರಾಮ ಸಮಿತಿ ಕಾರ್ಯದರ್ಶಿ ಶೇಖರ್ ಕುಂದರ್, ಸದಸ್ಯರಾದ ಚಂದ್ರಹಾಸ್. ಡಿ, ಸುನೀಲ್ ತೇವುಲ, ಶಾಖಾ ಕಾರ್ಯದರ್ಶಿ ಶ್ರಾವಣ್ ತೇವುಲ ಭಾಗವಹಿಸಿದ್ದರು.

ಸುನಿಲ್ ತೇವುಲ ಅವರನ್ನು ಶಾಖಾ ಕಾರ್ಯದರ್ಶಿಯಾಗಿ ಆಯ್ಕೆಯದರು. ದಿವ್ಯರಾಜ್ ತೇವುಲ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT