ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | 70 ಗ್ರಾಂ ಎಂಡಿಎಂಎ ವಶ: ಐವರು ಆರೋಪಗಳ ಬಂಧನ

Published : 2 ಅಕ್ಟೋಬರ್ 2024, 4:12 IST
Last Updated : 2 ಅಕ್ಟೋಬರ್ 2024, 4:12 IST
ಫಾಲೋ ಮಾಡಿ
Comments

ಮಂಗಳೂರು: ನಿಷೇಧಿತ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆರೋಪಿಗಳಿಂದ  70 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

‘ನಿಷೇಧಿತ ಮಾದಕ ವಸ್ತುವನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ಬಳಿ  ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಪ್ರಸ್ತುತ ಶಿವಮೊಗ್ಗದ ಟಿಪ್ಪು ನಗರದಲ್ಲಿ ವಾಸವಿರುವ, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬೆಂಗ್ರೆಯ ಅಬ್ದುಲ್ ಶಾಕೀರ್ (24), ಮಂಜೇಶ್ವರ ಕುಂಜತ್ತೂರಿನ ಹಸನ್ ಆಶೀರ್ (34), ಯಾಸೀನ್ ಇಮ್ರಾಜ್ ಅಲಿಯಾಸ್ ಇಂಬು(35), ಕಣ್ಣೂರು ಜಿಲ್ಲೆಯ ಪಯ್ಯನೂರಿನ ರಿಯಾಜ್ ಎ.ಕೆ. (31), ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಮೊಹಮ್ಮದ್ ನೌಷಾದ್ (22) ಬಂಧಿತರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

‘ಆರೋಪಿಗಳಿಂದ ವಶಕ್ಕೆ ಪಡೆದ ಎಂಡಿಎಂಎ ಮೌಲ್ಯ ₹ 3.50 ಲಕ್ಷ, ಅಲ್ಲದೇ 5 ಮೊಬೈಲ್ ಫೋನ್ ಗಳು, ₹ 1460 ನಗದು, ಡಿಜಿಟಲ್ ಮಾಪಕ ಸೇರಿದಂತೆ ಒಟ್ಟು ₹ 4.25 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು  ಐಷಾರಾಮಿ ಜೀವನ ಸಾಗಿಸಲು ಬೆಂಗಳೂರು ಹಾಗೂ ಇತರ ಕಡೆಗಳಿಂದ  ಖರೀದಿಸಿದ ಎಂಡಿಎಂಎಯನ್ನು ಕಳ್ಳಸಾಗಣೆ ಮಾಡಿ  ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಈ  ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ  ಪತ್ತೆ ಕಾರ್ಯ ಮುಂದುವರಿದಿದೆ’ ಎಂದರು.

ಆರೋಪಿ ಹಸನ್ ಅಶಿರ್  ಹಾಗೂ ಆರೋಪಿ ಯಾಸೀನ್ ಇಮ್ರಾಜ್ ಮಂಜೇಶ್ವರ ಠಾಣೆಯಲ್ಲಿ ದಾಕಲಾಗಿದ್ದ  ಮಾದಕ ವಸ್ತು ಮಾರಾಟ ಪ್ರಕರಣದಲ್ಲೂ ಆರೋಪಿಗಳಾಗಿದ್ದರು.  ಯಾಸಿನ್‌ ವಿರುದ್ಧ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ  2 ಪ್ರಕರಣ ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್  ನೇತೃತ್ವದಲ್ಲಿ ನಡೆದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್ ಎಚ್.ಎಂ, ಪಿಎಸ್ಐ ಶರಣಪ್ಪ ಭಂಡಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಮಹಮ್ಮದ್ ನೌಷಾದ್
ಮಹಮ್ಮದ್ ನೌಷಾದ್
ರಿಯಾಜ್‌
ರಿಯಾಜ್‌
ಯಾಸೀನ್‌ ಇಮ್ರಾಜ್‌
ಯಾಸೀನ್‌ ಇಮ್ರಾಜ್‌
ಅಬ್ದುಲ್ ಶಾಕೀರ್‌
ಅಬ್ದುಲ್ ಶಾಕೀರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT