ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CET Results: ಬಿ.ಎಸ್ಸಿ ಕೃಷಿಯಲ್ಲಿ ರೀತಮ್ ಬಿ 2ನೇ ರ್‍ಯಾಂಕ್

Last Updated 20 ಸೆಪ್ಟೆಂಬರ್ 2021, 11:55 IST
ಅಕ್ಷರ ಗಾತ್ರ

ಮಂಗಳೂರು: ‘ರ್‍ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ, 2ನೇ ರ್‍ಯಾಂಕ್ ಬರಬಹುದೆಂದು ಊಹಿಸಿರಲಿಲ್ಲ’ ಎಂದು ರೀತಮ್ ಬಿ. ಪ್ರತಿಕ್ರಿಯಿಸಿದರು.

ಬಿ.ಎಸ್ಸಿ (ಕೃಷಿ)ಯಲ್ಲಿ 2ನೇ ರ್‍ಯಾಂಕ್, ನಿಸರ್ಗ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಪಶು ವಿಜ್ಞಾನ ಮತ್ತು ‘ಬಿ’ ಫಾರ್ಮಾ ವಿಭಾಗದಲ್ಲಿ 3ನೇ ರ್‍ಯಾಂಕ್ ಪಡೆದಿರುವ ರೀತಮ್, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ. ಅವರು ಕೋಲಾರದಲ್ಲಿ ರೇಡಿಯಾಲಜಿಸ್ಟ್ ಆಗಿರುವ ಡಾ. ಬಯ್ಯಪ್ಪರೆಡ್ಡಿ ಮತ್ತು ಭಾರತಿ ದಂಪತಿ ಪುತ್ರ.

‘ಕೋವಿಡ್–19 ಕಾರಣಕ್ಕೆ ಆನ್‌ಲೈನ್ ಕೋಚಿಂಗ್ ಪಡೆಯುತ್ತಿದ್ದೆ. ಕಾಲೇಜಿನಲ್ಲಿ ನಿರಂತರವಾಗಿ ನಡೆಸುತ್ತಿದ್ದ ಅಣಕು ಪರೀಕ್ಷೆ ನೆರವಾಯಿತು. ದಿನಕ್ಕೆ 8–10 ತಾಸು ಅಭ್ಯಾಸ ಮಾಡುತ್ತಿದ್ದೆ. ನೀಟ್ ಪರೀಕ್ಷೆ ಬರೆದಿದ್ದು, ಅದರಲ್ಲೂ ಒಳ್ಳೆಯ ರ್‍ಯಾಂಕ್ ಬರುವ ನಿರೀಕ್ಷೆ ಇದೆ. ವೈದ್ಯಕೀಯ ಶಿಕ್ಷಣ ಓದುವ ಆಸಕ್ತಿ ಇದೆ. ಸಾಧನೆ ಮಾಡಲು ಬಯಸುವವರು ಪ್ರಥಮ ಪಿಯುಸಿಯಿಂದಲೇ ಕಠಿಣ ಅಭ್ಯಾಸ ಆರಂಭಿಸಬೇಕು’ ಎಂಬುದು ರೀತಮ್ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT