ಮಂಗಳೂರು: ಪಾರ್ಟ್ಟೈಮ್ ಉದ್ಯೋಗ ನೀಡುವುದಾಗಿ ಮತ್ತು ಆನ್ಲೈನ್ ಟಾಸ್ಕ್ ಪೂರ್ಣಗೊಳಿಸಿದರೆ ಹಣ ಗಳಿಸಬಹುದೆಂಬ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ₹27.56 ಲಕ್ಷ ವಂಚಿಸಿದ ಸಂಬಂಧ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಪಾರ್ಟ್ಟೈಮ್ ಉದ್ಯೋಗ ನೀಡುವ ಮತ್ತು ಟಾಸ್ಕ್ ಪೂರ್ಣಗೊಳಿಸುವ ಬಗ್ಗೆ ದೂರುದಾರರ ಟೆಲಿಗ್ರಾಂ ಸಂಖ್ಯೆಗೆ ಜೂನ್ 19ರಂದು ಸಂದೇಶ ಬಂದಿದೆ. ದೂರುದಾರರು 30 ಟಾಸ್ಕ್ ಪೂರ್ಣಗೊಳಿಸಿದಾಗ ಅವರಿಗೆ ₹900 ಲಾಭಾಂಶ ದೊರೆತಿದೆ. ಅದೇ ಅವರು ₹11ಸಾವಿರ ಮೊತ್ತ ಠೇವಣಿಗೆ ಮಾಡಿದ್ದಕ್ಕೆ ₹70ಸಾವಿರ ಮೊತ್ತವನ್ನು ಅಪರಿಚಿತರು ನೀಡಿದ್ದಾರೆ. ಇದೇ ರೀತಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಮಾಡಬಹುದು ಎಂದು ಅವರು ಹೇಳಿದ ಮಾತನ್ನು ನಂಬಿದ ದೂರುದಾರರು ಆಗಸ್ಟ್ 26ರವರೆಗೆ, ಹಂತ ಹಂತವಾಗಿ ಒಟ್ಟು ₹27.56 ಲಕ್ಷ ಮೊತ್ತವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಂತರ ಅವರಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.