ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ಆಹಾರ ಶ್ವಾಸನಾಳದಲ್ಲಿ ಸಿಲುಕಿ ಮಗು ಸಾವು

Published 12 ಜನವರಿ 2024, 14:04 IST
Last Updated 12 ಜನವರಿ 2024, 14:04 IST
ಅಕ್ಷರ ಗಾತ್ರ

ಕಾಸರಗೋಡು: ಶ್ವಾಸನಾಳದಲ್ಲಿ ಆಹಾರ ಸಿಲುಕಿ ಮಗು ಮೃತಪಟ್ಟ ಘಟನೆ ಪಳ್ಳಿಕ್ಕರೆ ಮವ್ವಲ್ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ, ಕೂಲಿಕಾರ್ಮಿಕ, ಬಾಲಕೃಷ್ಣ-ಸುಮಲತಾ ದಂಪತಿ ಪುತ್ರ ಶಿವಕೃಷ್ಣ (ಒಂದೂ ಮುಕ್ಕಾಲು ವರ್ಷ) ಮೃತಪಟ್ಟ ಮಗು. ಮಂಚದಲ್ಲಿ ಕುಳಿತಿದ್ದ ಮಗು ಕುಸಿದು ಬಿದ್ದ ವೇಳೆ ಮನೆಮಂದಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಮಗು ಮೃತಪಟ್ಟಿತ್ತು. ಶ್ವಾಸನಾಳದಲ್ಲಿ ಆಹಾರ ಸಿಲುಕಿಕೊಂಡಿದ್ದರಿಂದ ಮಗು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಬೇಕಲ ಪೊಲೀಸರು ಮಹಜರು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT