ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕ್ಯೂಟ್‌ ಹೌಸ್‌-ಬಿಜೈ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಹೆಸರು: ಮೇಯರ್‌

Published 13 ಮಾರ್ಚ್ 2024, 5:48 IST
Last Updated 13 ಮಾರ್ಚ್ 2024, 5:48 IST
ಅಕ್ಷರ ಗಾತ್ರ

ಮಂಗಳೂರು: ‘ನಗರದ ಸರ್ಕ್ಯೂಟ್‌ ಹೌಸ್‌ನಿಂದ ಬಿಜೈ ವೃತ್ತದವರೆಗಿನ ರಸ್ತೆಗೆ ಕೇಂದ್ರದ ಮಾಜಿ ಸಚಿವ, ಸಮತಾ ಚಳವಳಿಯ ನೇತಾರ ದಿ.ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಿದ್ದೇವೆ’ ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು,‘ಜಾರ್ಜ್‌ ಫರ್ನಾಂಡಿಸ್ ಅವರು 1930ರ ಜೂನ್‌ 3ರಂದು ನಗರದ ಬಿಜೈನಲ್ಲಿ ಜಾನ್‌ ಜೋಸೆಫ್‌ ಫರ್ನಾಂಡಿಸ್‌– ಆಲಿಸ್‌ ಮಾರ್ಥಾ ಫರ್ನಾಂಡಿಸ್ ದಂಪತಿಯ ಹಿರಿಯ ಮಗನಾಗಿ ಜನಿಸಿದ್ದರು. 1961- 68ರವರೆಗೆ ಮುಂಬೈ ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ದಲಿತರ ಮತ್ತು ದುರ್ಬಲ‌ವರ್ಗದವರ ಧ್ವನಿಯಾಗಿ ಹೊರಹೊಮ್ಮಿದ್ದರು. ಬಳಿಕ ಲೋಕಸಭಾ ಸದಸ್ಯರಾದರು. 1974ರಲ್ಲಿ ರೈಲ್ವೆ ಕಾರ್ಮಿಕರ ಮುಷ್ಕರದ ಮುಂದಾಳತ್ವ ವಹಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರು.  ಅವರು ರೈಲ್ವೆ ಸಚಿವರಾಗಿದ್ದಾಗ ಕೊಂಕಣ ರೈಲ್ವೆ ಯೋಜನೆ ಜಾರಿಯಾಗಿದೆ’ ಎಂದರು.

ಲೋಕಸಭಾ ಚುನಾವಣೆ ಮುಗಿದ ಬಳಿಕ ಈ ಕುರಿತು ಅದ್ದೂರಿ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಕ್ರೈಸ್ತ ಧರ್ಮಗುರುಗಳಿಗೂ ಆಹ್ವಾನ ನೀಡುತ್ತೇವೆ’ ಎಂದರು.

ಈ ನಾಮಕರಣಕ್ಕೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್‌ ಅವರಿಗೆ ಮೇಯರ್ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT