ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಗಣನೀಯ ಸಾಧನೆ

ಕಳಿಯ ಸಹಕಾರಿ ಸಂಘದ ಗೊದಾಮು ಕಟ್ಟಡ ಉದ್ಘಾಟಿಸಿದ ರಾಜೇಂದ್ರ ಕುಮಾರ್
Published 21 ಜೂನ್ 2023, 15:31 IST
Last Updated 21 ಜೂನ್ 2023, 15:31 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ರೈತ ಕುಟುಂಬಗಳಿಗೆ, ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ತಕ್ಷಣ ನೆರವಿಗೆ ಸಿಗುವುದು ಸಹಕಾರಿ ಬ್ಯಾಂಕ್‌ಗಳು. ಸಹಕಾರಿ ಸದಸ್ಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿದ್ದು ಇದರಿಂದ ಇಡೀ ದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಕ್ಷೇತ್ರ ಮೊದಲ ಸ್ಥಾನದಲ್ಲಿದೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಬುಧವಾರ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡ ಹಾಗೂ ಸಂಘದ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳಿಯ ಸಹಕಾರಿ ಸಂಘ ಕಳೆದ ಮೂವತ್ತು ವರ್ಷಗಳ ಹಿಂದೆ ಸಣ್ಣ ಮಟ್ಟಡಲ್ಲಿ ವ್ಯವಹಾರ ಮಾಡುತ್ತಾ ಇಂದು ವಾರ್ಷಿಕ ₹250 ಕೋಟಿ ವ್ಯವಹಾರ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಪ್ರಾಮಾಣಿಕ ವ್ಯವಹಾರ ಮತ್ತು ಅಧ್ಯಕ್ಷ, ನಿರ್ದೇಶಕರು ಹಾಗೂ ಸದಸ್ಯರ ಪ್ರೋತ್ಸಾಹವೇ ಇದಕ್ಕೆ ಕಾರಣ. ಇದರ ನೂತನ ಗೋದಾಮು ಕಟ್ಟಡಕ್ಕೆ ₹7 ಲಕ್ಷ ಸಹಾಯ ನೀಡುವುದಾಗಿ ತಿಳಿಸಿದರು.

ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಎಂದು ನವೋದಯ ಸ್ವ ಸಹಾಯ ಸಂಘ ಪ್ರಾರಂಭಿಸಿದ್ದು ಇದರಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಇವರ ಪ್ರಾಮಾಣಿಕತೆಯಿಂದ ಬ್ಯಾಂಕ್ ಇಷ್ಟು ಎತ್ತರಕ್ಕೆ ಏರಲು ಸಹಕಾರಿಯಾಗಿದೆ ಎಂದರು.

ಪುತ್ತೂರು ಉಪವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಪ್ರತಿಮಾ ಮಾತನಾಡಿ, 'ರಾಜೇಂದ್ರಕುಮಾರ್ ಅವರು ಸಹಕಾರಿ ಕ್ಷೇತ್ರವನ್ನು ಉನ್ನತ ಮಟ್ಟಕ್ಜೆ ಏರಿಸಿದ್ದಾರೆ,  ನವೋದಯ ಸ್ವಸಹಾಯ ಸಂಘ ವಿವಿಧ  ಜಿಲ್ಲೆಗಳಿಗೆ ವಿಸ್ತರಿಸಲು ಅವರ ಬೆಂಬಲವೇ ಕಾರಣ' ಎಂದರು.

ಕಳಿಯ ಸಹಕಾರಿ ಸಂಘದ ಅದ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿದ್ದರು, ‘ಸಂಘವು ಸದಸ್ಯರ ಪ್ರೋತ್ಸಾಹದಿಂದ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ. ಸಂಘದ ಬೆಳವಣಿಗೆಗೆ ಜಿಲ್ಲಾ ಸಹಕಾರಿ ಸಂಘದ ಅದ್ಯಕ್ಷರಾದ ರಾಜೇಂದ್ರ ಕುಮಾರ್ ಅರವರ ಕೊಡುಗೆ ಅಪಾರ. ಕೋವಿಡ್‌ ಸಂದರ್ಭದಲ್ಲಿ ಅವರು ನಮಗೆ ನೀಡಿರುವ ಪ್ರೋತ್ಸಾಹದಿಂದ ಇಡೀ ನಮ್ಮ ಸದಸ್ಯ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು. ಸಂಘವು ಆರ್ಥಿಕವಾಗಿ ಮೇಲೆ ಬರಲು ಸಹಕಾರಿಯಾಯಿತು' ಎಂದರು.

ಕಳಿಯ ಗ್ರಾಮ ಪಂಚಾಯಿತಿ ಅದ್ಯಕ್ಷೆ ಸುಭಾಷಿನಿ ಜನಾರ್ದನ ಗೌಡ, ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಲತಾ ಶುಭ ಹಾರೈಸಿದರು.

ಸಂಘದ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ನಿರ್ದೇಶಕರಾದ ಎಂ. ಹರಿದಾಸ ಪಡಂತ್ತಾಯ ಮಲವೂರ, ರಾಜೀವ ಗೌಡ ಕಲಾಯಿದೊಟ್ಟು, ದೇವಣ್ಣ ಮೂಲ್ಯ ಕೆರೆಕೋಡಿ, ಶೇಖರ ನಾಯ್ಕ್ ಸ್ಫೂರ್ತಿ ಗೇರುಕಟ್ಟೆ, ರಾಜ್ ಪ್ರಕಾಶ್ ಶೆಟ್ಟಿ ಪಡೈಲ್ , ರತ್ನಾಕರ ಬಳ್ಳಿದಡ್ಡ, ಚಂದ್ರಾವತಿ ಕಟ್ಟದ ಬೈಲ್, ಶಶಿದರ ಶೆಟ್ಡಿ ಹೀರ್ಯ, ನೋಣಯ್ಯ ಕುಂಟಿನಿ, ಮಮತಾ ನಾಳ, ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ಇದ್ದರು.

ಎರಡನೆ ಬಾರಿಗೆ ಶಾಸಕರಾಗಿ ಅಯ್ಕೆಯಾಗಿರುವ ಹರೀಶ್ ಪೂಂಜಾ ಹಾಗೂ ಮದರ್ ತೆರೇಸಾ ಮೆಮೊರಿಯಲ್ ನ್ಯಾಷನಲ್ ಅವಾರ್ಡ್ ಪುರಸ್ಕೃತ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.ವಿಮಾ ಪರಿಹಾರ ವಿತರಿಸಲಾಯಿತು.ಸಂಘದ ಸದಸ್ಯರಿಗೆ ಉಚಿತ ಮೈಲು ತುತ್ತು ವಿತರಿಸಲಾಯಿತು.

ತಾಲ್ಲೂಕು ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಮುಡ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸತ್ಯಶಂಕರ ಕೆ.ಜಿ ವಂದಿಸಿದರು.

‘ಒತ್ತಡ ತರಬೇಕು’
‘ಕರಾವಳಿ ಭಾಗದಲ್ಲಿ ಭತ್ತದ ಬೆಳೆ ನಷ್ಟದಲ್ಲಿ ಇದ್ದು ರೈತರು ಭತ್ತ ಬೆಳೆಯಲು ಮುಂದೆ ಬರುತ್ತಿಲ್ಲ. ಜನಪ್ರತಿನಿದಿಗಳು ಸರ್ಕಾರದ ಮೇಲೆ ಒತ್ತಡ ತಂದು ಬೆಂಬಲ ಬೆಲೆ ನೀಡುವಂತೆ ಒತ್ತಡ ತರಬೇಕು’ ಎಂದು ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT