ಮಂಗಳೂರು: ಅಹಮದಾಬಾದ್ನಲ್ಲಿ ದುರಂತಕ್ಕೆ ಈಡಾದ ವಿಮಾನದ ಸಹ ಪೈಲೆಟ್ ಕ್ಲೈವ್ ಕುಂದರ್ ಅಂತಃಕರಣ ಹೊಂದಿದ್ದ ಮೃದು ಮನದ ವ್ಯಕ್ತಿ. ಚಿಕ್ಕಂದಿನಿಂದಲೇ ವಿಮಾನ ಯಾನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು ಎಂದು ನೆನಪಿಸಿಕೊಂಡರು ಅವರ ಕುಟುಂಬದ ಒಡನಾಡಿಯೊಬ್ಬರು.

ಕ್ಲೈವ್ ತಂದೆ ಕ್ಲಿಫರ್ಡ್ ಕುಂದರ್ ಮಂಗಳೂರಿನವರು, ನಂತರ ಅವರ ಕುಟುಂಬ ಮುಂಬೈನ ಸಾಂತಾಕ್ರೂಸ್ ಕಲಿನಾದಲ್ಲಿ ವಾಸವಾಗಿತ್ತು. ‘ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದ ಕ್ಲೈವ್ ನಿಧನ ಸುದ್ಧಿ ಆಘಾತ ಮೂಡಿಸಿದೆ. ಅವರ ದುರಂತ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ’ ಎಂದು ಅವರು ಹೇಳಿದರು.

‘ಕ್ಲಿಫರ್ಡ್ ಆಯ್ಲ್ ರಿಗ್ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ರೇಖಾ 33 ವರ್ಷ ಗಗನಸಖಿಯಾಗಿ ಕೆಲಸ ನಿರ್ವಹಿಸಿದವರು. ಪಾಲಕರ ಪ್ರೋತ್ಸಾಹದಿಂದ ಕ್ಲೈವ್, ಬಾಂಬೆ ಫ್ಲೈಯಿಂಗ್ ಕ್ಲಬ್ನ ಕಾಲೇಜ್ ಆಫ್ ಏವಿಯೇಷನ್ನಲ್ಲಿ ಪದವಿ ಪಡೆದು, ಪ್ಯಾರಿಸ್ನಲ್ಲಿ ಪೈಲೆಟ್ ತರಬೇತಿ ಪಡೆದರು. 2012ರಲ್ಲಿ ಪೈಲೆಟ್ ಆಗಿ ಕೆಲಸ ಪ್ರಾರಂಭಿಸಿದ ಅವರು, 2017ರಲ್ಲಿ ಏರ್ ಇಂಡಿಯಾಕ್ಕೆ ಸೇರಿದರು. 13 ವರ್ಷಗಳಲ್ಲಿ 1,100 ಗಂಟೆಗಳ ಹಾರಾಟದ ಅನುಭವ ಪಡೆದುಕೊಂಡಿದ್ದರು’ ಎಂದು ಕ್ಲೈವ್ ಅವರ ಬದುಕಿನ ವೃತ್ತಾಂತ ಬಿಚ್ಚಿಟ್ಟರು.

ಮಗಳ ಜೊತೆ ಇರುವ ಪಾಲಕರು, ಒಬ್ಬನೇ ಪುತ್ರನಾಗಿದ್ದ ಕ್ಲೈವ್ ಅಂತ್ಯ ಸಂಸ್ಕಾರಕ್ಕೆ ಭಾರತಕ್ಕೆ ಮರಳಲಿದ್ದಾರೆ. ಅಂತ್ಯಕ್ರಿಯೆ ವಿವರಗಳ ಇನ್ನೂ ಮಾಹಿತಿ ದೊರೆತಿಲ್ಲ ಎಂದು ಇನ್ನೊಬ್ಬರು ಸಂಬಂಧಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.