ಪ್ರಜಾವಾಣಿ ವಾರ್ತೆ

ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ): ಅಡಿಕೆ ಮತ್ತು ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುವ ಕೊಕ್ಕೊ ಬೆಳೆಯ ಧಾರಣೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ದರವು ಪ್ರತಿ ಕೆ.ಜಿಗೆ ₹200 ಗಡಿ ದಾಟಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಧಾರಣೆಯು ₹ 75ರಿಂದ ₹90ರ ನಡುವೆ ಇತ್ತು. ಕೆ.ಜಿ.ಗೆ ₹125ರ ಗಡಿ ಕೂಡ ದಾಟಿರಲಿಲ್ಲ. ಇದೀಗ ಹಸಿ ಕೊಕ್ಕೊ ಧಾರಣೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಒಣ ಕೊಕ್ಕೊ ಧಾರಣೆಯೂ ಏರಿಕೆಯಾಗಿದೆ.

ಪುತ್ತೂರಿನ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಧಾರಣೆ ಮಂಗಳವಾರವೂ ಕೆ.ಜಿಗೆ ₹205 ಇತ್ತು.

ಉತ್ಪಾದನೆ ಇಳಿಮುಖವಾಗಿರುವುದು ಹಾಗೂ ದಾಸ್ತಾನು ಕಡಿಮೆ ಇರುವುದೇ ಬೆಲೆ ಏರಿಕೆಗೆ ಕಾರಣ ಎಂದು ವರ್ತಕರು ಹೇಳುತ್ತಾರೆ.

Graphic text / Statistics - ಪುತ್ತೂರು: ಅಡಿಕೆ-ತೆಂಗು ಕೃಷಿಯೊಂದಿಗೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತಿರುವ ಕೊಕ್ಕೊ ಬೆಳೆಯ ಧಾರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಪ್ರತೀ ಕೆಜಿಗೆ ರೂ. 200 ಗಡಿ ದಾಟಿದ್ದು ಇದು ಈ ತನಕದ ಸಾರ್ವಕಾಲಿಕ ದಾಖಲೆ ಧಾರಣೆಯಾಗಿದೆ. ಕೆಲ ವರ್ಷಗಳ ಹಿಂದೆ ಹಸಿಕೊಕ್ಕೋ ಧಾರಣೆ ತೀರಾ ಕುಸಿತಕ್ಕೊಳಗಾಗಿ ಕೆಜಿಯೊಂದಕ್ಕೆ ರೂ.30ರಿಂದ 40 ರ ಒಳಗಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆಯೂ ಇರಲಿಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಧಾರಣೆ ರೂ.75ರಿಂದ 90 ರ ನಡುವೆಗೆ ಬಂದು ನಿಂತಿತ್ತು. ಹೆಚ್ಚೆಂದರೆ ಕೆಜಿಗೆ ರೂ.125ರ ಗಡಿ ದಾಟಿರಲಿಲ್ಲ. ಆದರೆ ಇದೀಗ ಹಸಿ ಕೊಕ್ಕೋ ಧಾರಣೆ ನಿರೀಕ್ಷೆಗೂ ಮೀರಿ ಏರಿಕೆಯಾಗತೊಡಗಿದ್ದು ಹಸಿ ಕೊಕ್ಕೋ ಧಾರಣೆ ಜಿಗಿತದ ಜತೆಗೆ ಒಣ ಕೊಕ್ಕೋ ಧಾರಣೆಯಲ್ಲೂ ಏರಿಕೆ ಕಂಡಿದೆ. ಸೋಮವಾರ ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಕೆಜಿಯೊಂದಕ್ಕೆ ರೂ.205 ಇತ್ತು. ಕೆಲವು ಕಡೆಗಳಲ್ಲಿ ರೂ.210 ಕ್ಕೂ ಹಸಿಕೊಕ್ಕೋ ಖರೀದಿಸಲಾಗಿದೆ. ಬೇಡಿಕೆ ಹೆಚ್ಚಾಗಿರುವು ದರಿಂದ ಧಾರಣೆಯಲ್ಲಿ ಇನ್ನೂ ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆ ಇದೆ. ಕೊಕ್ಕೋ ಧಾರಣೆ ತೀರಾ ಕುಸಿತಕ್ಕೊಳಗಾಗಿದ್ದ ಸಂದರ್ಭದಲ್ಲಿ ಕೊಕ್ಕೋ ಕೃಷಿಯ ಬಗ್ಗೆ ಕರಾವಳಿ ಭಾಗದ ಕೃಷಿಕರು ನಿರ್ಲಕ್ಷಿಸಿದ್ದರು. ಅಡಿಕೆ ಧಾರಣೆಯಲ್ಲಿ ಬಹಳಷ್ಟು ಚೇತರಿಕೆ ಕಂಡು ಬಂದ ಬಳಿಕವಂತೂ ಅಡಿಕೆ ತೋಟಗಳಲ್ಲಿ ಉಪ ಕೃಷಿಯಾಗಿ ಮಾಡಲಾಗುತ್ತಿದ್ದ ಕೊಕ್ಕೋ ಮಿಶ್ರ ಬೆಳೆಗೆ ಮಹತ್ವ ನೀಡದೆ ಸಂಪೂರ್ಣವಾಗಿ ಕಡೆಗಣಿಸಿದ್ದರು. ಮಾತ್ರವಲ್ಲದೆ ಕರಾವಳಿ ಭಾಗದ ಹೆಚ್ಚಿನ ಕೃಷಿಕರು ಅಡಿಕೆ ತೋಟಗಳ ನಡುವೆ ಇದ್ದ ಕೊಕ್ಕೋ ಗಿಡಗಳನ್ನೇ ಕಡಿದು ತೆರವುಗೊಳಿಸಿದ್ದರು. ಆದರೆ ಇದೀಗ ಕೊಕ್ಕೋ ಧಾರಣೆ ರೂ.200ರ ಗಡಿ ದಾಟಿರುವುದರಿಂದ ಈ ಕೃಷಿಯನ್ನು ನಿರ್ಲಕ್ಷಿಸಿದ ಇಲ್ಲಿನ ಕೃಷಿಕರು ಪಶ್ಚಾತ್ತಾಪ ಪಡುವಂತಾಗಿದೆ. ದೇಶೀಯ ಮಟ್ಟದಲ್ಲಿ ಕೊಕ್ಕೋ ಉತ್ಪಾದನೆ ತೀರಾ ಕುಸಿತಗೊಂಡಿರುವುದು ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಕೊಕ್ಕೋ ಉತ್ಪಾದನೆ ಇಳಿಮುಖವಾಗಿರುವುದು ಹಾಗೂ ಕೊಕ್ಕೋ ದಾಸ್ತಾನು ತೀರಾ ಕಡಿಮೆಯಾಗಿರುವುದರಿಂದ ಕೊಕ್ಕೋಗೆ ಇದೀಗ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ಅನುಗುಣವಾಗಿ ಕೊಕ್ಕೋ ಪೂರೈಕೆ ಇಲ್ಲದಿರುವುದರಿಂದ ಮಾರುಕಟ್ಟೆಯಲ್ಲಿ ಕೊಕ್ಕೋ ಧಾರಣೆ ಹೆಚ್ಚಾಗತೊಡಗಿದೆ. ಇದರಿಂದಾಗಿ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಅಡಿಕೆ ಮತ್ತು ತೆಂಗು ಕೃಷಿಯ ನಡುವೆ ಉಪ ಬೆಳೆಯಾಗಿ ಕೊಕ್ಕೋ ಬೆಳೆಯನ್ನು ಬೆಳೆಯುತ್ತಿರುವ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ವರ್ಷ ಅಡಿಕೆ ಧಾರಣೆ ರೂ.500ರ ಗಡಿದಾಟಿರುವುದರಿಂದ ಅಡಿಕೆ ಕೃಷಿಕರು ನೆಮ್ಮದಿ ಕಂಡು ಕೊಂಡಿದ್ದರು. ಪ್ರಸ್ತುತ ಅಡಿಕೆ ಧಾರಣೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ವಿದೇಶಗಳಿಂದ ಅಡಿಕೆ ಆಮದು ಆಗುತ್ತಿರುವ ಹಾಗೂ ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಬರುತ್ತಿರುವ ಕಾರಣದಿಂದಾಗಿ ಅಡಿಕೆ ಧಾರಣೆ ಇನ್ನಷ್ಟು ಕುಸಿಯಬಹುದೆಂಬ ಆತಂಕದಲ್ಲಿ ಕಂಗಾಲಾಗಿದ್ದ ಇಲ್ಲಿನ ಕೃಷಿಕರಿಗೆ ಕೊಕ್ಕೋ ಧಾರಣೆ ಟಾನಿಕ್ ಆಗಿ ಉಲ್ಲಾಸ ಮೂಡಿಸಿದೆ. ---------------------------------------------------

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.