ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಕೌಶಲ ಅನಾವರಣಕ್ಕೆ ವೇದಿಕೆ

ಸಹ್ಯಾದ್ರಿಯಲ್ಲಿ ‘ಟೆಕ್-ವಿಷನ್- ಎಲವೇಟ್’: ಡಾ.ಸಂಧ್ಯಾ ಆರ್. ಅಣ್ವೇಕರ್‌
Last Updated 1 ಮೇ 2019, 15:38 IST
ಅಕ್ಷರ ಗಾತ್ರ

ಮಂಗಳೂರು: ‘ಅತ್ಯುತ್ತಮ ಆಲೋಚನೆ ಹೊಂದಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ ಅನಾವರಣ ಮಾಡುವಂತಹ ಉತ್ತಮ ವೇದಿಕೆ ಇದಾಗಿದ್ದು, ಈ ಯೋಚನೆ, ಯೋಜನೆಗಳು ನಿರಂತರವಾಗಿ ಮುಂದುವರೆಯಬೇಕು. ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ’ ಎಂದು ಕರ್ನಾಟಕ ಇನೋವೇ
ಶನ್‌ ಅಂಡ್‌ ಟೆಕ್ನಾಲಜಿ ಸೊಸೈಟಿ (ಕಿಟ್ಸ್‌) ಐಟಿ-ಬಿಟಿ ವಿಭಾಗದ ಕೌಶಲ ಕಾರ್ಯಕ್ರಮದ ಮುಖ್ಯಸ್ಥೆ ಡಾ.ಸಂಧ್ಯಾ ಆರ್. ಅಣ್ವೇಕರ್‌ ಹೇಳಿದರು.

ಮಂಗಳೂರಿನ ಅಡ್ಯಾರ್‌ ಸಹ್ಯಾದ್ರಿಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ‘ಟೆಕ್-ವಿಷನ್- ಎಲವೇಟ್ 50’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶಿಷ್ಟ ಆಲೋಚನೆ ಹೊತ್ತು ತಂದಿರುವ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಅವುಗಳನ್ನು ಸೃಜನಾತ್ಮಕ ಕೌಶಲ ಮೂಲಕ ಪ್ರಯೋಗಿಸಿ ಉತ್ಪನ್ನಗಳನ್ನಾಗಿ ಮಾಡಿ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕು. ಸೃಜನಶೀಲ ವಿಚಾರಗಳಿಗೆ ಎಂದಿಗೂ ತಡೆಯೊಡ್ಡಬೇಡಿ. ಅವುಗಳನ್ನು ಪೋಷಣೆ ಮಾಡುವ ಕೆಲಸ ಮಾಡಬೇಕು. ಹೊಳೆದ ಕೌಶಲ ವಿಚಾರಗಳನ್ನು ನಾಜೂಕಾಗಿ ತಯಾರಿಸಿ ಉತ್ಪನ್ನಗಳನ್ನಾಗಿ ಮಾಡಿ, ಈ ಮೂಲಕ ನಿಮ್ಮ ಪೋಷಕರ ಕನಸು ಹಾಗೂ ಕಲಿತ ಸಂಸ್ಥೆಗೆ ಉತ್ತಮ ಹೆಸರು ತರುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತುಮ್ಯಾನೇಜ್‌ಮೆಂಟ್ ಕಾಲೇಜಿನ ಅಧ್ಯಕ್ಷಮಂಜುನಾಥ ಭಂಡಾರಿ ಅವರು ಮಾತನಾಡಿ, ಸಹ್ಯಾದ್ರಿ ಪ್ರಾಜೆಕ್ಟ್ ಸಪೋರ್ಟ್ ಸ್ಕೀಮ್ (ಎಸ್‌ಪಿಎಸ್‌ಎಸ್) ₹20 ಲಕ್ಷನಿಧಿ ಇಡಲಾಗಿದೆ. ಇದರಲ್ಲಿ ಪ್ರತಿಯೊಂದು ಅರ್ಹ ವಿದ್ಯಾರ್ಥಿಗಳಿಗೆ ಯೋಜನೆಗಳ ಮೂಲಕ ಅನುದಾನ ನೀಲಾಗುತ್ತದೆ. ಎಂಜಿನಿಯರಿಂಗ್‌ ಎಂದರೆ ಕೇವಲ ಹಣ ಮಾಡುವ ವೃತ್ತಿಯಲ್ಲ. ಇದರಿಂದ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕು. ಸಮಾಜದ ಸಮಸ್ಯೆಗಳನ್ನು ಸಮಾಜಮುಖಿ ಚಿಂತನೆ ಮೂಲಕ ಪರಿಹಾರ ಮಾಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಅಭಿವೃದ್ಧಿಗೆ ಪ್ರಾಡಕ್ಟ್ ಆಧರಿತ ಸ್ಟಾರ್ಟಅಪ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದಾರೆ. ಪ್ರತಿಯೊಂದು ವಿಭಾಗವು 10 ಯೋಜನೆಗಳನ್ನು ಆಯ್ಕೆ ಮಾಡುತ್ತದೆ. ಐದು ಇಲಾಖೆಗಳಿಂದ 50 ಯೋಜನೆಗಳಿವೆ. ಅಂತಿಮವಾಗಿ 50 ಎಲಿವೆಟ್ ತಂಡಗಳು ಆಯ್ಕೆಯಾಗಿವೆ. ಇದರಲ್ಲಿ 50 ರ ಪೈಕಿ 20 ತಂಡ ಆಯ್ಕೆ ಮಾಡಿ ಪ್ರತಿ ತಂಡಕ್ಕೆ ₹ 1ಲಕ್ಷ ಯೋಜನೆಯ ಅನುದಾನ ನೀಡಲಾಗುವುದು. ಕಲಿಕೆ ಜತೆಗೆ ಉತ್ತಮವಾದ ಗಳಿಕೆ, ಸಮಾಜಮುಖಿ ಚಿಂತನೆ ಬೆಳೆಸುವುದು ನಮ್ಮ ಮುಖ್ಯ ಉದ್ದೇಶ ಎಂದು ಅವರು ಹೇಳಿದರು.

ಎಂಎಚ್‌ಆರ್‌ಡಿ ಉನ್ನತ ಶಿಕ್ಷಣದ ಎಐಸಿಟಿಇನ ಉಪ ನಿರ್ದೇಶಕ ಡಾ. ಮಧುಕರ್ ಎಂ., ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಸ್ಟಾರ್ಟ್‌ ಅಪ್ ಕರ್ನಾಟಕದ ಉದಯ್ ಬಿರ್ಜೆ, ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಪ್ರಾಂಶುಪಾಲ ಡಾ. ಆರ್. ಶ್ರೀನಿವಾಸ್ ರಾವ್ ಕುಂಟೆ, ಉಪಪ್ರಾಚಾರ್ಯ ಬಾಲಕೃಷ್ಣ ಇದ್ದರು.ರತೀಶ್ಚಂದ್ರ ಗಟ್ಟಿ ಸ್ವಾಗತಿಸಿದರು. ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT