ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸಮುದಾಯ ಭವನ ಉದ್ಘಾಟನೆ ಮೇ 8ಕ್ಕೆ

Last Updated 1 ಮೇ 2022, 6:11 IST
ಅಕ್ಷರ ಗಾತ್ರ

ಮಂಗಳೂರು: ಕೋಡಿಕಲ್ ಗುರುನಗರದ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರದಿಂದ ನಾರಾಯಣಗುರುಗಳ ಬಿಂಬ ಪ್ರತಿಷ್ಠೆ, ನವೀಕರಣಗೊಳಿಸಿದ ಗುರುಮಂದಿರ, ಸಮುದಾಯ ಭವನದ ಉದ್ಘಾಟನೆ ಮೇ 8ರಂದು ನಡೆಯಲಿದೆ ಎಂದು ಎಸ್‍ಎನ್‍ಡಿಪಿ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿ ಉಪಸ್ಥಿತಿಯಲ್ಲಿ ಕೇರಳ ಶಿವಗಿರಿ ಮನೋಜ್ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ವಾಸ್ತುತಜ್ಞ ರಾಜ್‍ಕುಮಾರ್ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.

ಮೇ 5ರಂದು ಸಂಜೆ 4ಕ್ಕೆ ನಾರಾಯಣಗುರುಗಳ ಬಿಂಬವನ್ನು ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಗುರುಮಂದಿರಕ್ಕೆ ಶೋಭಾಯಾತ್ರೆಯಲ್ಲಿ ತರಲಾಗುತ್ತದೆ. ಮೇ 7ರಂದು ಬೆಳಿಗ್ಗೆ 7ಕ್ಕೆ ಋತ್ವಿಜರ ಆಗಮನ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ಸಂಜೆ 5ಕ್ಕೆ ಗುರುಪೂಜೆ, ವಾಸ್ತು ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಬಿಂಬಾವಾಸ ನಡೆಯಲಿದೆ ಎಂದರು.

8ರಂದು ಬೆಳಿಗ್ಗೆ 6ಗಂಟೆಗೆ ಗುರುಪೂಜೆ, ಅಷ್ಟದ್ರವ್ಯ ಗಣಪತಿ ಹೋಮ, ಪೂರ್ವಾಹ್ನ 9.20ರ ಮಿಥುನ ಲಗ್ನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಬಿಂಬ ಪ್ರತಿಷ್ಠೆ, ಕಲಶ ಅಭಿಷೇಕ, ಮಹಾಪೂಜೆ, ಮಂಗಳಾರತಿ, ಪಲ್ಲಪೂಜೆ, ಅನ್ನಸಂತರ್ಪಣೆ, ಮೇ 9ರಂದು ಬೆಳಿಗ್ಗೆ 6ರಿಂದ ಮೇ 10ರ ಬೆಳಗ್ಗೆ 6ರವರೆಗೆ ಏಕಾಹ ಭಜನೋತ್ಸವ ನಡೆಯಲಿದೆ ಎಂದರು.

ಕೋಡಿಕಲ್ ಎಸ್‍ಎನ್‍ಡಿಪಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಮಹಾನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್ ಕೊಡಿಕಲ್, ಎಸ್‍ಎನ್‍ಡಿಪಿ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ದಯಾಮಣಿ ವಿ. ಕೋಟ್ಯಾನ್, ಸ್ವಾಗತ ಸಮಿತಿ ಸದಸ್ಯ ಚಿತ್ರರಂಜನ್ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT