ಉಜಿರೆ: 'ಜೈನಧರ್ಮ ಹಾಗೂ ಜೈನರ ಧಾರ್ಮಿಕ ಭಾವನೆಗಳಿಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜೈನ ಸಮಾಜದ ವತಿಯಿಂದ ಸೋಮವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಮಹೇಶ್ ಶೆಟ್ಟಿ ಮತ್ತು ರಾಜು ಶೆಟ್ಟಿ ಜೈನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜೈನ ಸಮಾಜದ ಪರವಾಗಿ ಉಜಿರೆಯ ಓಡಲ ನಿವಾಸಿ ಅಜಯ್ ಕುಮಾರ್ ದೂರು ನೀಡಿದ್ದಾರೆ.

ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಾಪುರಮಠ ದೂರು ಸ್ವೀಕರಿಸಿದರು. ಬೆಳ್ತಂಗಡಿ ಜೈನ್ಮಿಲನ್ ಅಧ್ಯಕ್ಷ ನವೀನ್ ಕುಮಾರ್, ವಕೀಲ ಶಶಿಕಿರಣ್ ಜೈನ್, ಸುಕೇಶ್ ಕಡಂಬು, ಜೈನ್ಮಿಲನ್ ಪದಾಧಿಕಾರಿಗಳು, ಸದಸ್ಯರು,ಶ್ರಾವಕರು, ಶ್ರಾವಕಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.