ಮೂಲ್ಕಿ: ‘ರಾಜ್ಯದಲ್ಲಿ ಯುವ ಕಾಂಗ್ರೆಸ್ಗೆ 4.5 ಲಕ್ಷ ಕಾರ್ಯಕರ್ತರ ನೋಂದಣಿಯಾಗಿದೆ. ಇದು ದೇಶದಲ್ಲಿಯೇ ಕ್ಷಿಪ್ರ ಬೆಳವಣಿಗೆಯಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಮ್ಮ ಮೂಲ ಉದ್ದೇಶ’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ‘ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕೋವಿಡ್ ಸಮಯದಲ್ಲಿ ಯುವ ಕಾರ್ಯಕರ್ತರು ಸೇನಾನಿಗಳಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಜನರು ಕಾಂಗ್ರೆಸ್ ಅನ್ನು ಗೌರವಿಸುತ್ತಿದ್ದಾರೆ’ ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಯುವ ಕಾಂಗ್ರೆಸ್ನ ಮಹತ್ತರವಾದ ಕೊಡುಗೆ ಇದೆ. ಹಿರಿಯ ನಾಯಕರು ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಈಗಲೇ ದಿಟ್ಟ ನಿರ್ಧಾರ ಮಾಡಲಿ’ ಎಂದರು.

ಕಾಂಗ್ರೆಸ್ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಿಥುನ್ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆ ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುವುದು ಸಹಜ. ಪಕ್ಷದ ಸಂಘಟನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿದಲ್ಲಿ ಮಾತ್ರ ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ’ ಎಂದರು.

ಪ್ರವೀಣಕುಮಾರ್ ಬೊಳ್ಳೂರು, ಎಚ್.ವಸಂತ ಬೆರ್ನಾಡ್, ಧನಂಜಯ ಮಟ್ಟು, ಪದ್ಮಾವತಿ ಶೆಟ್ಟಿ, ಧನರಾಜ್ ಕೋಟ್ಯಾನ್ ಸಸಿಹಿತ್ಲು, ಅನಿಲ್ ಯಾದವ್, ಸುರ್ಬಿ ದ್ವಿವೇದಿ, ವಿದ್ಯಾ ಬಾಲಕೃಷ್ಣನ್, ಭವ್ಯಾ, ದೀಪಿಕಾ ರೆಡ್ಡಿ, ಮೆರಿಲ್ ರೇಗೊ ಇದ್ದರು.

ಮೂಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್ಸ್ವಾಗತಿಸಿದರು. ನಂತರ ರಕ್ಷಾ ರಾಮಯ್ಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.