ಮೂಡುಬಿದಿರೆ: ‘ಜಿಲ್ಲೆಯ ಸಹಕಾರ ಸಂಘಗಳು ಜನಸ್ನೇಹಿ ಸೇವೆಗಳ ಮೂಲಕ ಲಾಭದಾಯಕವಾಗಿವೆ. ಕೃಷಿ ಸಾಲಗಳಲ್ಲಿ ಶೇ 100, ಮಹಿಳೆಯರಿಗೆ ನೀಡಿದ ಸಾಲಗಳಲ್ಲಿ ಶೇ 98ರಷ್ಟು ಮರುಪಾವತಿಯಾಗುತ್ತಿವೆ’ ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಇಲ್ಲಿನ ಮಹಾಲಸ ಕಟ್ಟಡದಲ್ಲಿ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿಯ 4ನೇ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರಿಗೆ ಶೇ 25ರವರೆಗೆ ಲಾಭಾಂಶವನ್ನು ಜಿಲ್ಲೆಯ ಸಹಕಾರ ಸಂಘಗಳು ಮಾತ್ರ ನೀಡುತ್ತಿವೆ. ನಮ್ಮ ಜಿಲ್ಲೆ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ತವರೂರು ಆಗಿತ್ತು. ಆದರೆ, ಇಂದು ಆ ಜಾಗದಲ್ಲಿ ಸಹಕಾರ ಸಂಘಗಳು ಬೆಳೆಯುತ್ತಿವೆ ಎಂದರು. ಸೊಸೈಟಿಗೆ ₹ 2 ಲಕ್ಷ ದೇಣಿಗೆಯನ್ನು ಅವರು ಪ್ರಕಟಿಸಿದರು.

ಮೂಲ್ಕಿ ಅರಮನೆಯ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಭದ್ರತಾ ಕೊಠಡಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಅಭಯಚಂದ್ರ ಜೈನ್, ‘ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾರ್ಡ್, ನಿರ್ದೇಶಕರು, ಸಿಬ್ಬಂದಿಯ ಕಾಳಜಿಯಿಂದ ಸೊಸೈಟಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ’ ಎಂದರು.

ಚೌಟರ ಅರಮನೆಯ ಕುಲದೀಪ್ ಎಂ., ಸುಧಾ ಭಟ್ ಅವರಿಗೆ ಪ್ರಥಮ ಠೇವಣಿ ಪತ್ರ ನೀಡಿದರು. ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಪ್ರಥಮ ಅಮೃತ ನಗದು ಪತ್ರವನ್ನು ಸುಮತಿ ಬಲ್ಲಾಳ್ ಅವರಿಗೆ ವಿತರಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಕಂಪ್ಯೂಟರ್ ವ್ಯವಸ್ಥೆಗೆ ಚಾಲನೆ ನೀಡಿದರು.

ಸಿಎಸ್ಐ ಕ್ರಿಸ್ತ ಶಾಂತಿ ಚರ್ಚ್ನ ಸಭಾಪಾಲಕ ಸಂತೋಷ್ ಕುಮಾರ್ ಅವರು ಪ್ರಮೀಳಾ ಅವರಿಗೆ ಮಾಸಿಕ ಠೇವಣಿ ಪತ್ರ ವಿತರಿಸಿದರು. ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂರ್ಯ ಕುಮಾರ್ ಅವರು ಅಬ್ದುಲ್ ರೆಹ್ಮಾನ್ ಅವರಿಗೆ ಪ್ರಥಮ ವಾಹನ ಸಾಲ ಮಂಜೂರಾತಿ ಪತ್ರ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರು ನಮಿರಾಜ್ ಬಲ್ಲಾಳ್ ಅವರಿಗೆ ನಿತ್ಯನಿಧಿ ಪಾಸ್ ಪುಸ್ತಕ, ವಕೀಲ ಶರತ್ ಡಿ.ಶೆಟ್ಟಿ ಅವರು ವೇಣೂರು ಪ್ರೇರಣಾ ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆ ನೀಡಿದರು. ಮೂಡುಬಿದಿರೆ ಚರ್ಚ್ನ ಪ್ರಧಾನ ಧರ್ಮಗುರು ಓವಿಲ್ ಡಿಸೋಜ ಉಳಿತಾಯ ಖಾತೆಯ ಪಾಸ್ ಪುಸ್ತಕ ವಿತರಿಸಿದರು.

ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಶಿರ್ತಾಡಿ ಸೊಸೈಟಿ ಅಧ್ಯಕ್ಷ ಪ್ರವೀಣ್ ಕುಮಾರ್, ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಪುಚ್ಚೆಮೊಗರಿನ ಅಧ್ಯಕ್ಷ ಕುಮಾರ್ ಪೂಜಾರಿ, ಲಯನ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಪುರಸಭೆ ಸದಸ್ಯ ಇಕ್ಬಾಲ್ ಕರೀಂ, ಶಾಖಾ ಪ್ರಬಂಧಕ ಅಭಿಷ್ಟಾ ಜೈನ್, ಮಹಾಲಸ ಕಟ್ಟಡ ಮಾಲೀಕ ದೇವದಾಸ್ ಭಟ್ ಭಾಗವಹಿಸಿದ್ದರು.

ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಸಿಇಒ ಸುದರ್ಶನ್ ವಂದಿಸಿದರು. ಅಕ್ಷತಾ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.